ಚಿಂಚೋಳಿ: ‘ತಾಲ್ಲೂಕಿನಲ್ಲಿ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಬಿಟ್ಟು ಹೋದ ಮನೆಗಳಿಗೆ ನಲ್ಲಿ ಮತ್ತು ಕೊಳವೆ ಮಾರ್ಗ ಕೈಗೊಳ್ಳಲು, ಪರ್ಯಾಯ ಜಲಮೂಲಕ್ಕಾಗಿ ₹2.1 ಕೋಟಿ ಅನುದಾನ ಕೆಕೆಆರ್ಡಿಬಿಯಿಂದ ಮಂಜೂರು ಮಾಡಲಾಗಿದೆ’ ಎಂದು ಜಿಪಂ ಸಿಇಒ ಭಂವರಸಿಂಗ್ ಮೀನಾ ತಿಳಿಸಿದರು.

ತಾಲ್ಲೂಕಿನ ಐನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂಂಯಾರ್-ಕೆ ಗ್ರಾಮದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಮತ್ತು ನಿವಾರಣೆಗೆ ಕೈಗೊಂಡ ಕ್ರಮಗಳನ್ನು ಸೋಮವಾರ ಪರಿಶೀಲಿಸಿದರು.

ನಂತರ ಬೆನಕೆಪಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಜಲಮೂಲ ಪರಿಶೀಲಿಸಿದರು. ನಂತರ ಸಲಗರ ಬಸಂತಪುರ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯ ಪಂಪಹೌಸ್, ಕೊಳವೆ ಮಾರ್ಗ ಮತ್ತು ನೀರು ಶುದ್ಧಿಕರಣ ಘಟಕ ವೀಕ್ಷಿಸಿ ತಾಪಂ ಸಭಾಂಗಣದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮತ್ತು ಗ್ರಾಮೀಣ ನೀರು ಪೂರೈಕೆ ಇಲಾಖೆ ಎಂಜಿನಿಯರ್ಗಳ ಸಭೆ ನಡೆಸಿ ಸೂಕ್ತ ನಿರ್ದೆಶನ ನೀಡಿದರು.

ತಾಪಂ, ಕಾರ್ಯನಿರ್ವಹಣಾಧಿಕಾರಿ ಸಂತೋಷ ಚವ್ಹಾಣ, ಗ್ರಾಮೀಣ ನೀರು ಪೂರೈಕೆ ಇಲಾಖೆಯ ಎಇಇ ಉಮೇಶ ರಾಠೋಡ, ಶಾಖಾಧಿಕಾರಿ ಯುವರಾಜ ರಾಠೋಡ, ಪಿಡಿಒ ಗೋವಿಂದರೆಡ್ಡಿ, ಹೀರಾಸಿಂಗ್, ಸುನೀಲ ರಟಕಲ್, ರಾಮಕೃಷ್ಣ ಕೊರಡಂಪಳ್ಳಿ, ವಿಜಯಲಕ್ಷ್ಮಿ, ಜ್ಯೋತಿ, ರಮೇಶ, ಪವನ ಮೊದಲಾದವರು ಇದ್ದರು.

ಮುಕ್ತಾಯ ಹಂತದಲ್ಲಿ ಬಹುಗ್ರಾಮ ಕುಡಿವ ನೀರಿನ ಯೋಜನೆ: ಸಲಗರ, ಬಸಂತಪುರ ಹಾಗೂ 9 ಗ್ರಾಮ, ತಾಂಡಾಗಳಿಗೆ ಕುಡಿವ ನೀರು ಪೂರೈಕೆಗಾಗಿ ಶಾಸಕ ಡಾ.ಅವಿನಾಶ ಜಾಧವ ಅವರು ಮಂಜೂರು ಮಾಡಿಸಿದ್ದ ₹14.5 ಕೋಟಿ ಅಂದಾಜು ಮೊತ್ತದ ಸಲಗರ ಬಸಂತಪುರ ಬಹುಗ್ರಾಮ ಕುಡಿವ ನೀರು ಪೂರೈಕೆ ಯೋಜನೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.

ಸಲಗರ ಬಸಂತಪುರ, ಪಾಲ್ತ್ಯಾ ತಾಂಡಾ, ಸಲಗರ ಕಾಲೋನಿ, ರಾಮಶೆಟ್ಟಿ ನಾಯಕ ತಾಂಡಾ, ಸಜ್ಜನಕೊಳ್ಳ, ಧರಿ ತಾಂಡಾ, ಬೆನಕೆಪಳ್ಳಿ, ಫತ್ತು ನಾಯಕ ತಾಂಡಾ, ಮೋನು ನಾಯಕ ತಾಂಡಾ, ಸೂರು ನಾಯಕ ತಾಂಡಾಗಳ ಜನರು ನಿತ್ಯ ಅನುಭವಿಸುವ ಕುಡಿವ ನೀರಿನ ಬವಣೆಗೆ ಯೋಜನೆ ಅನುಷ್ಠಾನದಿಂದ ಮುಕ್ತಿ ದೊರೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-31-1451460605

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.