ಚಿಂಚೋಳಿ: ತಾಲ್ಲೂಕಿನ ಚಿಂಚೋಳಿ, ಸುಲೇಪೇಟ, ಮಿರಿಯಾಣ ಮತ್ತು ಸೇಡಂ ಠಾಣೆ ವ್ಯಾಪ್ತಿಯಲ್ಲಿ ಮೇಕೆಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದ ನಾಲ್ವರು ಆರೋಪಿಗಳನ್ನು ಚಿಂಚೋಳಿ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆರೋಪಿಗಳನ್ನು ಯಾದಗಿರಿ ಜಿಲ್ಲೆಯ ಜಿನಕೇರಿ ತಾಂಡಾದ ಮಾರುತಿ ಸಕ್ರಪ್ಪ ಜಾಧವ, ಚನ್ನಪ್ಪ ಜಾಧವ, ಗೋವಿಂದ ಜಾಧವ, ಬಲ್ಲು ಜಾಧವ ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಆಡುಗಳನ್ನು ಮಾರಾಟ ಮಾಡಿದ್ದರಿಂದ ಬಂದ ಹಣ ನಗದು ₹1.9 ಲಕ್ಷ ಹಾಗೂ ಸ್ವಿಫ್ಟ್ ಡಿಜೈರ್ ಕಾರು ಜಪ್ತಿ ಮಾಡಿದ್ದಾರೆ.

ಚಿಂಚೋಳಿ ಠಾಣೆ ವ್ಯಾಪ್ತಿಯ ಫೆ.22ರಂದು ಹಣಮಂತ ಶರಣಪ್ಪ ತಳವಾರ ಅವರ 5 ಮೇಕೆ ಮತ್ತು 2 ಮರಿ (₹60 ಸಾವಿರ) ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.

ಅದರಂತೆ ಚಿಂಚೋಳಿಯ ವ್ಯಾಪ್ತಿಯ 7 ಮೇಕೆ ಮಾರಾಟದ ಹಣ ₹35 ಸಾವಿರ ಮತ್ತು ಸ್ವಿಫ್ಟ್ ಡಿಜೈರ್ ಕಾರು, ₹ 2 ಲಕ್ಷ ಹಾಗೂ ಮಿರಿಯಾಣ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾದ 5 ಮೇಕೆಗಳ ಮಾರಾಟದಿಂದ ಬಂದ ₹25 ಸಾವಿರ, ಸುಲೇಪೇಟ ಠಾಣೆ ವ್ಯಾಪ್ತಿಯ ವ್ಯಾಪ್ತಿಯಲ್ಲಿ ಕಳ್ಳತನವಾದ 16 ಕುರಿಗಳ ₹ 80 ಸಾವಿರ ಮತ್ತು ಸೇಡಂ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನವಾದ 10 ಮೇಕೆಗಳ ಮಾರಾಟದಿಂದ ಬಂದ ₹ 50 ಸಾವಿರ ಹೀಗೆ ಒಟ್ಟು ₹ 1.9 ಲಕ್ಷ ನಗದು ಮತ್ತು ಸ್ವಿಫ್ಟ್ ಡಿಜೈರ್ ಕಾರು ಜಪ್ತಿ ಮಾಡಲಾಗಿದೆ.

ಡಿವೈಎಸ್ಪಿ ಸಂಗಮನಾಥ ಹಿರೇಮಠ, ಸರ್ಕಲ್ ಇನಸ್ಪೆಕ್ಟರ್ ಕಪಿಲದೇವ ಗಡಾದ್, ಸಬ್ ಇನ್ಸ್ಪೆಕ್ಟರ್ ಗಂಗಮ್ಮ ಜಿನಿಕೇರಿ ಹಾಗೂ ತಂಡದವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-31-1558458431

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.