ಚಿಂಚೋಳಿ: ತಾಲ್ಲೂಕಿನ ವಿವಿಧೆಡೆ ಸೋಮವಾರ ಸಂಜೆ ಗುಡುಗು ಮಿಂಚು ಸಹಿತ ಬಿರುಗಾಳಿಯೊಂದಿಗೆ ಆಲಿಕಲ್ಲಿನ ಮಳೆಯಾಗಿದೆ.

ತಾಲ್ಲೂಕಿನ ಪಟಪಳ್ಳಿ, ಮೋತಕಪಳ್ಳಿ, ತುಮಕುಂಟಾ, ನಾಗಾಈದಲಾಯಿ, ಕೋಳ್ಳೂರು, ಹಸರಗುಂಡಗಿ, ಚಂದ್ರಂಪಳ್ಳಿ, ಐನೋಳ್ಳಿ, ನಾಗಾಈದಲಾಯಿ, ಮರಪಳ್ಳಿ, ಸಾಲೇಬೀರನಹಳ್ಳಿ ಮೊದಲಾದ ಕಡೆ ಮಳೆ ಆಲಿಕಲ್ಲು ಮಳೆಯಾಗಿದೆ.

ಬಿಸಿಲಿನ ಕಂಗಾಲಾಗಿದ್ದ ಜನರಿಗೆ ಮಳೆ ತಂಪೆರೆದಿದೆ. ಆದರೆ ಅಕಾಲಿಕ ಸುರಿದ ಮಳೆಗೆ ಈರುಳ್ಳಿ (ಚೆಂಡು) ಬೀಜ ಬೆಳೆಗಾರರಿಗೆ ಮಾರಕವಾಗಿ ಪರಿಣಮಿಸಿದೆ.

ಪ್ರಸಕ್ತ ವರ್ಷ ಈರುಳ್ಳಿ ಬೀಜ ಬೆಳೆಯಲ್ಲಿ ತೆನೆ(ಹೂವು) ಬಿಟ್ಟರೂ ದುಂಬಿಗಳ ಕೊರತೆಯಿಂದ ಅಸಮರ್ಪಕ ಪರಾಗಸ್ಪರ್ಶದಿಂದ ತೆನೆಗಳು ಸರಿಯಾಗಿ ಕಾಳು ಕಟ್ಟಿಲ್ಲ. ಅಲ್ಲದೆ ಆಲಿಕಲ್ಲು ಮಳೆಯಿಂದ ಬೀಜ ಬೆಳೆಗಾರರಿಗೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ ನಾಗಾಈದಲಾಯಿ ಗ್ರಾಮದ ರೈತ ವಿಜಯಕುಮಾರ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.