ಚಿಂಚೋಳಿ: ತಾಲ್ಲೂಕಿನ ಕಲ್ಲೂರು ರೋಡ ಗ್ರಾಮದಲ್ಲಿ ಗೋಮಾಳಕ್ಕೆ ಮೀಸಲಾಗಿದ್ದ ಸರ್ಕಾರಿ ಜಮೀನು ಅತಿಕ್ರಮಣ ಆರೋಪದ ಮೇರೆಗೆ ತೆಲಂಗಾಣ ಮೂಲದ ದಾಮೋದರ ರೆಡ್ಡಿ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲ್ಲೂರಿನ ಸರ್ವೆ ನಂ. 55/1ರಲ್ಲಿ 4-16 , 55/2 ರಲ್ಲಿ 4-17 , 55/3ರಲ್ಲಿ 4-30 ಹೀಗೆ 13 ಎಕರೆ 23 ಗುಂಟೆಯಲ್ಲಿ ಅತಿಕ್ರಮಣ ಕಂಡು ಬಂದಿದ್ದರಿಂದ ಆರೋಪಿಯ ವಿರುದ್ಧ ಕರ್ನಾಟಕ ಭೂಕಂದಾಯ ಅಧಿನಿಯಮ 1964ರ 192ಎ ಅಡಿಯಲ್ಲಿ ಮಿರಿಯಾಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಮೀನು ಚೆಟ್ಟಿನಾಡ ಸಿಮೆಂಟ್ ಕಾರ್ಪೊರೇಷನ್ ವತಿಯಿಂದ ಗೋಮಾಳಕ್ಕಾಗಿ ಮೀಸಲಾಗಿರಿಸಲು ರೈತರಿಂದ ಖರೀದಿಸಿ ಸರ್ಕಾರಕ್ಕೆ ವಹಿಸಲಾಗಿತ್ತು. ಇದೇ ಜಮೀನಿನಲ್ಲಿ ಗೋಶಾಲೆ ತೆರೆಯಲು ಹಾಗೂ ಮೇವು ಬೆಳೆಯಲು ಅತಿಕ್ರಮಣದಾರರು ಮುಂದಾಗಿದ್ದರು. ಜತೆಗೆ ರೈತರ ಜಮೀನಿಗೆ ಹೋಗುವ ದಾರಿಗಳು ಮುಚ್ಚಿದ ಬಗ್ಗೆ ಕಲ್ಲೂರು ಗ್ರಾಮದ ಕೆಲವರು ತಹಶೀಲ್ದಾರರಿಗೆ ದೂರು ಸಲ್ಲಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-31-2093771790

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.