ಚಿಂಚೋಳಿ: ಕಲ್ಯಾಣ ಕರ್ನಾಟಕ ಪ್ರದೇಶದ ಜನರಿಗೆ ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ಸಮಾನ ಅವಕಾಶಗಳನ್ನು ಒದಗಿಸುವುದು ಮತ್ತು ಪ್ರದೇಶದ ಅಭಿವೃದ್ಧಿಯನ್ನು ಸುಧಾರಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಪ್ರದೇಶ 371(ಜೆ) ಸಂರಕ್ಷಣಾ ಸಮಿತಿ ರಚನೆಗೆ ಪಟ್ಟಣದ ವೈಜನಾಥ ಪಾಟೀಲ ಸ್ಮಾರಕದ ಬಳಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ವೈಜನಾಥ ಪಾಟೀಲ ಭಾನುವಾರ ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ, ‘ವಿಜಯನಗರದಿಂದ ಔರಾದವರೆಗೆ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ 371(ಜೆ) ಸಂರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬರಲಿದೆ. ಈಗಾಗಲೇ ಕೊಪ್ಪಳದಲ್ಲಿ ಈ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ’ ಎಂದು ಹೇಳಿದರು.

‘ಉದ್ಯೋಗ ಮತ್ತು ಬಡ್ತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಅಭಿವೃದ್ಧಿಯಲ್ಲೂ ಹಿಂದುಳಿದ ಕ್ಷೇತ್ರಗಳು ಈಗಲೂ ಹಿಂದೆಯೇ ಬಿದ್ದಿವೆ. ಅಭಿವೃದ್ಧಿ ಅನುದಾನ ಬಂದರೂ ಪೂರ್ಣ ಖರ್ಚಾಗುತ್ತಿಲ್ಲ. ಮತ್ತು ಅಭಿವೃದ್ಧಿಯೂ ಗೋಚರಿಸುತ್ತಿಲ್ಲ’ ಎಂದು ಕೊಪ್ಪಳದ ಸಮಿತಿ ಪ್ರಮುಖರಾದ ಶರಣಪ್ಪ ಜೆ.ಡಿ ತಿಳಿಸಿದರು.

ಸಭೆಯಲ್ಲಿ ಹೈ.ಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಹರಸೂರು, ಕೆ.ಎಂ.ಬಾರಿ, ಗೋಪಾಲರಾವ ಕಟ್ಟಿಮನಿ, ಚಿತ್ರಶೇಖರ ಪಾಟೀಲ, ಶ್ರೀಮಂತ ಕಟ್ಟಿಮನಿ, ಭೀಮಶೆಟ್ಟಿ ಮುರುಡಾ, ಶಾಮರಾವ ಚಿಂಚೋಳಿ, ಬಸವರಾಜ ಸುಲೇಪೇಟ ಮಾತನಾಡಿದರು.

ಸಭೆಯಲ್ಲಿ ಹಿರಿಯರಾದ ಕುಪೇಂದ್ರ ಫತೆಪುರ, ಗುಂಡಯ್ಯ ಸ್ವಾಮಿ, ಪೀತಾಂಬರ ಘಂಟಿ, ಸತೀಶ ಇಟಗಿ, ಜಗನ್ನಾಥ ಈದಲಾಯಿ, ಶ್ರೀನಂದರೆಡ್ಡಿ ಹಾಗೂ ಸುರೇಶ ಕುಷ್ಠಗಿ, ಹೇಮಣ್ಣ ಪೂಜಾರ, ಬಸವರಾಜ ಬೂದಿಹಾಳ, ಬಸವರಾಜ ಹರಗೇರಿ, ದೇವಪ್ಪ ಉಳ್ಳಾಗಡ್ಡಿ, ಮಹಮದ್ ಅಲಿ ಸೇರಿದಂತೆ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.