ಚಿಂಚೋಳಿ: ತಾಲ್ಲೂಕಿನ ಬಾವನಗುಡಿ ಕೋಕುನಾಯಕ ತಾಂಡಾದಲ್ಲಿ 30ಕ್ಕೂ ಹೆಚ್ಚು ಮಂದಿ ಸರ್ಕಾರಿ ನೌಕರರಿದ್ದಾರೆ.

ಮೂಲ ಸೌಕರ್ಯಗಳಿಂದ ವಂಚಿತವಾದ ಸಲಗರ ಬಸಂತಪುರ ಗ್ರಾಪಂ ವ್ಯಾಪ್ತಿಯ ಬೆನಕೆಪಳ್ಳಿ ಕಂದಾಯ ಗ್ರಾಮದಲ್ಲಿ ಬರುವ ಬಾವನಗುಡಿ ಕೋಕು ನಾಯಕ ತಾಂಡಾದಲ್ಲಿ ಯುವಕರು ಸ್ವಂತ ಪರಿಶ್ರಮದಿಂದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆದುಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಸಾರಿಗೆ ಸೌಲಭ್ಯವಿಲ್ಲದ ಈ ತಾಂಡಾದಲ್ಲಿ 180 ಮನೆಗಳಿವೆ. ಸುಮಾರು 650 ಮತದಾರರಿದ್ದಾರೆ. ಒಂದರಿಂದ 6ನೇ ತರಗತಿವರೆಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು 110 ಮಕ್ಕಳು ದಾಖಲಾಗಿದ್ದಾರೆ. ಇಲ್ಲಿ ಎರಡು ಅಂಗನವಾಡಿ ಕೇಂದ್ರಗಳಿದ್ದು ಬಾವನಗುಡಿಯ ಕೇಂದ್ರದಲ್ಲಿ 75, ಕೋಕು ನಾಯಕ ಕೇಂದ್ರದಲ್ಲಿ 35 ಮಕ್ಕಳು ಇದ್ದಾರೆ. ಮತದಾನ ಕೇಂದ್ರವೂ ಹೊಂದಿರುವ ಇಲ್ಲಿ ಪ್ರತ್ಯೇಕ ನ್ಯಾಯಬೆಲೆ ಅಂಗಡಿಯಿಲ್ಲ. ಪಡಿತರ ತರಬೇಕಾದರೆ 5 ಕಿ.ಮೀ ದೂರದ ಬೆನಕೆಪಳ್ಳಿಗೆ ತೆರಳುವುದು ಇಲ್ಲಿನ ಜನರಿಗೆ ಅನಿವಾರ್ಯವಾಗಿದೆ.

ಪ್ರಾಥಮಿಕ ಶಿಕ್ಷಣ ತಾಂಡಾದಲ್ಲಿ ಪಡೆದು ಪ್ರೌಢ ಶಿಕ್ಷಣ ಪಡೆಯಲು ಐನಾಪುರ, ಕಾಲೇಜು ಶಿಕ್ಷಣಕ್ಕಾಗಿ ಬೀದರ್ ಜಿಲ್ಲೆಯ ಚಿಟ್ಟಗುಪ್ಪ ಅವಲಂಬಿಸಿದ ಬಾವನಗುಡಿ ತಾಂಡಾ ಮಕ್ಕಳು ಸತತ ಪರಿಶ್ರಮದಿಂದ ಭವಿಷ್ಯ ರೂಪಿಸಿಕೊಂಡು ಮಾದರಿಯಾಗಿದ್ದಾರೆ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ನೀಲಕಂಠ ಜಾಧವ ತಿಳಿಸಿದರು.

ಇಂತಹ ತಾಂಡಾದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಸಾರಿಗೆ, ಕಂದಾಯ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಿವಿಲ್ ಪೊಲೀಸ್ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇಲ್ಲಿನ ನೌಕರರಲ್ಲಿ ಸಿವಿಲ್ ಪೊಲೀಸ್ ಮತ್ತು ಗಡಿ ಭದ್ರತಾ ಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಕೆಎಸ್ಆರ್ಪಿ, ಡಿಎಆರ್ ನೌಕರರೇ ಅಧಿಕ ಸಂಖ್ಯೆಯಲ್ಲಿರುವುದು ಗಮನಾರ್ಹವಾಗಿದೆ. ಇದಲ್ಲದೇ ಇಬ್ಬರು ಎಂಬಿಬಿಎಸ್, ಒಬ್ಬರು ಐಐಟಿ ಕೋಲ್ಕತ್ತದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. 20ಕ್ಕೂ ಅಧಿಕ ಮಂದಿ ಖಾಸಗಿ ಸ್ವಾಮ್ಯದ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಡತನ ಕಲಿಸುವ ಪಾಠವೇ ಸಾಧನೆಗೆ ಮೂಲ ಪ್ರೇರಣೆಯಾಗಿದೆ. ಸರಿಯಾದ ಮಾರ್ಗದರ್ಶನ, ಸಾಧಿಸುವ ಛಲ ಮತ್ತು ಪ್ರಯತ್ನ ಹಾಗೂ ನಿರಂತರ ಪರಿಶ್ರಮದಿಂದ ಚಿಕ್ಕ ತಾಂಡಾ ಹೆಚ್ಚು ಸರ್ಕಾರಿ ನೌಕರರನ್ನು ಹೊಂದಲು ಸಾಧ್ಯವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಮರ್ಪಕ ತರಬೇತಿ, ನಿರಂತರ ಅಧ್ಯಯನ, ಉದ್ಯೋಗಿಗಳ ಮಾರ್ಗದರ್ಶನದಿಂದ ಯುವಕರು ಈ ಸಾಧನೆ ಮಾಡಲು ಸಾಧ್ಯವಾಗಿದೆ.

ಸಾವಿರಾರು ಸಂಖ್ಯೆಯ ಮತದಾರರು, 500ಕ್ಕೂ ಅಧಿಕ ಮನೆಗಳಿರುವ ಗ್ರಾಮಗಳಲ್ಲಿ 10-15 ಮಂದಿ ಸರ್ಕಾರಿ ನೌಕರರು ದೊರೆಯುವುದು ವಿರಳವಾಗಿರುವಾಗ ಬಾವನಗುಡಿ-ಕೋಕುನಾಯಕ ತಾಂಡಾದ ಯುವಜನರ ಸಾಧನೆ ಮೆಚ್ಚುವಂತಹದ್ದಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-31-169791191

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.