ಚಿಂಚೋಳಿ: ತಾಲ್ಲೂಕಿನ ಮಿರಿಯಾಣ ಗ್ರಾಮದ ಪೊಲೀಸ್ ಠಾಣೆಯ ಹಿಂಭಾಗದ ಬಡಾವಣೆ ಮತ್ತು ಮಹಾವೀರ ಬಸದಿ ಹಿಂದುಗಡೆಯ ಬಡಾವಣೆಯಲ್ಲಿ ಉಂಟಾಗಿರುವ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಅರ್ಧ ಭಾಗಕ್ಕೆ ನೀರು ಪೂರೈಕೆ ಇಲ್ಲದೇ ಜನ ಕಂಗಾಲಾಗಿದ್ದು, ನೀರು ಪೂರೈಸುವ ಕೊಳವೆ ಬಾವಿಯ ಮೋಟಾರ್ ಸುಟ್ಟು ಹೋಗಿದ್ದು ದುರಸ್ತಿಗೊಳಿಸುತ್ತಿಲ್ಲ ಎಂದು ಆರೋಪಿಸಿ ಜನರೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಲಿ ಕೊಡಗಳು ಹಾಗೂ ಬುಟ್ಟಿಗಳನ್ನು ಪ್ರದರ್ಶನ ಮಾಡಿ ಸಮಸ್ಯೆ ನಿವಾರಣೆಗೆ ಒತ್ತಾಯಿಸಿದರು.

‘ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯ ಅಡಿಯಲ್ಲಿ ‘ಹರ್ ಘರ್ ಜಲ್’ ಘೋಷಣೆಯ ನೀರಿನ ಸೌಲಭ್ಯ ಕಲ್ಪಿಸಿದರೂ ಕೂಡ ಹನಿ ನೀರು ಬರುತ್ತಿಲ್ಲ. ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದೆ. ಕಳಪೆ ಕೆಲಸ ನಡೆಸಿ ಸರ್ಕಾರದ ಬೊಕ್ಕಸ ಲೂಟಿ ಮಾಡಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದು ಮಮಶೆಟ್ಟಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷ ಜಾಫರ್ ಖಾನ ಮಿರಿಯಾಣ, ಶೇಖರ ಸಿಂಗೂರು, ಮೊಗಲಪ್ಪ ಗಂಗೋಲಿ, ಸಲೀಂ, ನೂರ ಜಹಾ ಬೇಗಂ, ಪೆಂಟಮ್ಮ, ಗಂಗಮ್ಮ ಗುತ್ತೇದಾರ, ಭೀಮಲು, ಕಲೀಮ್, ಲಿಂಗಯ್ಯ ಗೌಡ್, ಶೇಖ್ ಬಾಬಾ ಮೊದಲಾದವರು ಇದ್ದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಂತೋಷ ಚವ್ಹಾಣ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಸಬ್ ಇನ್ಸ್ಪೆಕ್ಟರ್ ಚಂದ್ರಕಾಂತ ಸುಬೇದಾರ ಬಂದೋಬಸ್ತ್ ಕೈಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-31-619484575

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.