ಚಿಂಚೋಳಿ: ರಾಷ್ಟ್ರೀಯ ಹೆದ್ದಾರಿ 167 (ಎನ್)ರಲ್ಲಿ ಬರುವ ಚಿಂಚೋಳಿಯಿಂದ ಮಿರಿಯಾಣ ಗಡಿವರೆಗಿನ ಅಂತರರಾಜ್ಯ ರಸ್ತೆಯಲ್ಲಿ ಗುಂಡಿ ಮುಚ್ಚುವ ಕೆಲಸವನ್ನು ಪ್ರಾರಂಭಿಸಲಾಗಿದೆ.

ಭಾನುವಾರ ಅಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತ, ಕನಕದಾಸ ವೃತ್ತದ ಮಾರ್ಗವಾಗಿ ಪೋಲಕಪಳ್ಳಿ ವರೆಗೆ ಹೆದ್ದಾರಿಯಲ್ಲಿ ತಲೆ ಎತ್ತಿದ್ದ ಗುಂಡಿಗಳನ್ನು ಮುಚ್ಚಲಾಗಿದೆ.

ದೊಡ್ಡ ಗುಂಡಿಗಳಿಗೆ ಡಾಂಬರ್ ಹಾಕಿ ಮುಚ್ಚುವ ಕೆಲಸ ನಡೆಸಲಾಗುತ್ತಿದ್ದು, ಚಿಕ್ಕ ಗುಂಡಿಗಳು ಹಾಗೆಯೇ ಬಿಟ್ಟಿದ್ದಾರೆ. ಬಸವೇಶ್ವರ ವೃತ್ತದ ಬಸವಣ್ಣನವರ ಮೂರ್ತಿ ಹಿಂಭಾಗದಲ್ಲಿ ಗುಂಡಿಗಳನ್ನು ಮುಚ್ಚದೇ ಬಿಟ್ಟಿದ್ದಾರೆ. ಗುತ್ತಿಗೆದಾರರು ವೈಜ್ಞಾನಿಕವಾಗಿ ಗುಂಡಿ ಮುಚ್ಚುವ ಕಾಮಗಾರಿ ನಡೆಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ.

‘ಗುತ್ತಿಗೆದಾರರು ಗುಂಡಿಗಳನ್ನು ಚೌಕಾಕಾರದಲ್ಲಿ ಅಗೆದು ಗುಂಡಿ ಮುಚ್ಚಬೇಕು. ವೈಜ್ಞಾನಿಕವಾಗಿ ಗುಂಡಿಗಳನ್ನು ಮುಚ್ಚದಿದ್ದರೆ, ಮುಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ. ಸದ್ಯ ಡಾಂಬರ್ ಹಾಕಿದ್ದು ಕಾಮಗಾರಿ ಮುಗಿದ ಮೇಲೆ, ಈಗ ಡಾಂಬರ್ ಹಾಕಿದ ತೆಪೆ ಹಚ್ಚಿದ ಸ್ಥಳಗಳಲ್ಲಿ ಇನ್ನೊಂದು ಪದರು ಡಾಂಬರೀಕರಣ ನಡೆಸುತ್ತೇವೆ. ಮಿರಿಯಾಣ ಗಡಿಯಿಂದ ಚಿಂಚೋಳಿ ಪಟ್ಟಣದವರೆಗೆ ಗುಂಡಿ ಮುಕ್ತ ಹೆದ್ದಾರಿಯಾಗಿ ಮಾಡಿಕೊಡುತ್ತೇವೆ’ ಎಂದು ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಇಂದುಧರ ಮಂಗಲಗಿ ತಿಳಿಸಿದ್ದಾರೆ.

ರಸ್ತೆ ಮೇಲೆ ನಿರ್ಮಾಣವಾದ ಗುಂಡಿಗಳಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿರುವ ಕುರಿತು, ರಸ್ತೆಗೆ ಕಾಯಕಲ್ಪ ನೀಡುವಂತೆ ‘ಪ್ರಜಾವಾಣಿ’ ಮಾ.19ರಂದು ‘ಜನರ ಜೀವ ಹಿಂಡುತ್ತಿರುವ ಟೆಂಡರ್ ಪ್ರಕ್ರಿಯೆ’ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ಈಗ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಂಡಿ ಮುಚ್ಚುವ ಕಾರ್ಯ ಆರಂಭಿಸಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-31-2023392273

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.