ಚಿಂಚೋಳಿ: ತಾಲ್ಲೂಕಿನಲ್ಲಿ ಅಕಾಲಿಕ ಮಳೆಗೆ ತೋಟಗಾರಿಕಾ ಬೆಳೆಗಾರರು ಬೆಚ್ಚಿಬಿದ್ದಿದ್ದು, ಮಂಗಳವಾರ ರಾತ್ರಿ ಸುರಿದ ಮಳೆಗೆ ಬಾಳೆ ಬೆಳೆಗಾರರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ತಾಲ್ಲೂಕಿನ ದೇಗಲಮಡಿ ಗ್ರಾಮದಲ್ಲಿ ಅಕಾಲಿಕ ಮಳೆ ಹಾಗೂ ಬಿರುಗಾಳಿಗೆ ಸಾವಿರಾರು ಬಾಳೆ ಗಿಡಗಳು ಧರೆಗುರುಳಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

‘ದೇಗಲಮಡಿ ಗ್ರಾಮದ ಸೋಮಶೇಖರ ಶಂಕ್ರೆಪ್ಪ ಗೌಡನೂರು ಅವರ 3500 ಗಿಡಗಳು, ರಾಜೇಂದ್ರ ಬೀರಪ್ಪ ಅವರ 4000 ಗಿಡಗಳು ಸೇರಿದಂತೆ ದೇಗಲಮಡಿಯಲ್ಲಿ ಐದಾರು ರೈತರ ತೋಟಗಳಲ್ಲಿ ಬಾಳೆ ಅಧಿಕ ಪ್ರಮಾಣದಲ್ಲಿ ನೆಲಕ್ಕುರುಳಿದರೆ, ಹತ್ತಾರು ರೈತರ ಹೊಲಗಳಲ್ಲಿ 50 ರಿಂದ 100 ಗಿಡಗಳು ನೆಲಕ್ಕುರುಳಿವೆ.

ಇದರ ಜತೆಗೆ ಐನೋಳ್ಳಿ, ಕೋಳ್ಳೂರು ಮೊದಲಾದ ಗ್ರಾಮಗಳಲ್ಲಿಯೂ ಬಾಳೆ ಹಾಗೂ ಇನ್ನಿತರ ತೋಟಗಾರಿಕಾ ಬೆಳೆಗಳಿಗೆ ಮಳೆ ಹಾನಿಯುಂಟು ಮಾಡಿದೆ’ ಎಂದು ಮುಖಂಡ ಚಂದ್ರು ಅವರಾದಿ ತಿಳಿಸಿದ್ದಾರೆ.

ಸುಮಾರು 12 ಎಕರೆ ಬೆಳೆ ಸಂಪೂರ್ಣ ಹಾನಿಯಾದರೆ, ಭಾಗಶಃ ಹಾನಿಯಾದ ಬೆಳೆ ಪ್ರಮಾಣ ಹೆಚ್ಚಾಗಿದೆ. ಸೆಪ್ಟೆಂಬರ್ನಲ್ಲಿ ಸಸಿ ನೆಟ್ಟ ರೈತರ ಹೊಲದಲ್ಲಿ ಬಾಳೆ ಹೂವಾಡುವ ಹಂತದಲ್ಲಿತ್ತು. ಆದರೆ, ಭಾರಿ ಬಿರುಗಾಳಿಯೊಂದಿಗೆ ಸುರಿದ ಅಕಾಲಿಕ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ದೇಗಲಮಡಿಯಲ್ಲಿ ಒಬ್ಬೊಬ್ಬ ರೈತರಿಗೆ ₹10 ಲಕ್ಷಕ್ಕೂ ಅಧಿಕ ಪ್ರಮಾಣದ ನಷ್ಟ ಉಂಟಾಗಿದೆ.

ಅಧಿಕಾರಿಗಳ ಭೇಟಿ: ಗುಡುಗು ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಗೆ ಬಾಳೆ ಬೆಳೆ ನೆಲಕ್ಕುರುಳಿದ ತೋಟಗಳಿಗೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸಂತೋಷ ತಾಂಡೂರು, ಸಹಾಯಕ ತೋಟಗಾರಿಕಾ ಅಧಿಕಾರಿ ಇಮ್ರಾನ್ ಪಟೇಲ್ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-31-381462970

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.