ಚಿಂಚೋಳಿ: ಪಡಿತರ ಅಕ್ಕಿ ಕಳ್ಳ ಸಾಗಣೆ ಮತ್ತು ಕೆಲವು ವ್ಯಕ್ತಿಗಳು ಆಟೊಗಳಲ್ಲಿ ಮನೆ ಮನೆಗೆ ತಿರುಗಿ ಪಡಿತರ ಅಕ್ಕಿ ಖರೀದಿಸಿ ಮಾರಾಟ ಮಾಡುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕಲು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಭೆ ಆಯೋಜಿಸುವಂತೆ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಮಾಲಿ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾ.ಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸದಸ್ಯ ಜಗನ್ನಾಥ ಈದಲಾಯಿ, ‘ಮಿರಿಯಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಪಡಿತರ ಅಕ್ಕಿ ರಾಜಾರೋಷವಾಗಿ ಮನೆಗಳಿಂದ ಖರೀದಿಸಲಾಗುತ್ತಿದೆ. ಕೆಲವೊಮ್ಮೆ ನ್ಯಾಯಬೆಲೆ ಅಂಗಡಿ ಪಡಿತರ ಚೀಟಿದಾರರು ಆಹಾರ ಧಾನ್ಯ ಎತ್ತುವಳಿ ಮಾಡಿ ನೇರವಾಗಿ ಆಟೊದಲ್ಲಿ ಹಾಕಿ ಹಣ ಪಡೆದು ಮನೆಗೆ ಮರಳುತ್ತಿದ್ದಾರೆ. ಇಂತಹ ಹಲವು ಅಟೊಗಳನ್ನು ಹಿಡಿದುಕೊಟ್ಟರು ಪೊಲೀಸರು, ಆಹಾರ ಇಲಾಖೆಯ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿಲ್ಲ. ಪ್ರತಿ ತಿಂಗಳು ನೆರೆ ಜಿಲ್ಲೆಯ ವ್ಯಾಪಾರಿಗಳು 4-6 ಲೋಡ್ ಮಾಡಿ ಅಕ್ಕಿಯನ್ನು ಕಳ್ಳ ಸಾಗಣೆ ಮಾಡುತ್ತಿದ್ದಾರೆ’ ಎಂದು ದೂರಿದಾಗ ಅಧ್ಯಕ್ಷರು, ‘ಎಲ್ಲಾ ಡೀಲರ್ಗಳ ಸಭೆ ಕರೆಯಿರಿ. ತಹಶೀಲ್ದಾರ್ ಉಪಸ್ಥಿತಿಯಲ್ಲಿ ಸಭೆ ನಡೆಯಬೇಕು’ ಎಂದು ಸೂಚಿಸಿದರು.

ಯುವನಿಧಿಗೆ ತಾಲ್ಲೂಕಿನಲ್ಲಿ 1671 ಫಲಾನುಭವಿಗಳಿದ್ದಾರೆ. ಕೌಶಲ್ಯಾಭಿವೃದ್ಧಿ ಇಲಾಖೆ ಶೇ25 ಫಲಾನುಭವಿಗಳು ನಿಜವಾಗಿಯೂ ನಿರುದ್ಯೋಗಿಗಳೇ ಎಂದು ತಂಡ ರಚಿಸಿ ಪರಿಶೀಲಿಸಲಾಗಿದ್ದು ನೂರಕ್ಕೆ 3/4 ಜನ ಉದ್ಯೋಗಿಗಳಾಗಿರುವುದು ದೃಢಪಟ್ಟಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಎಲ್ಲಾ ಫಲಾನುಭವಿಗಳನ್ನು ಪರಿಶೀಲಿಸಿದರೆ ಇದರ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ನೀವು ಕೆಲಸ ಮಾಡಿ ಎಂದು ಅಧ್ಯಕ್ಷ ಬಸವರಾಜ ಮಾಲಿ ತಿಳಿಸಿದರು.

‘ಯುವನಿಧಿ ಪ್ಲಸ್ ಅಡಿಯಲ್ಲಿ ಉದ್ಯೋಗಗಕ್ಕಾಗಿ ತರಬೇತಿ ನೀಡಲು ಫಲಾನುಭವಿಗಳಿಗೆ ಕರೆದರೆ ಸ್ಪಂದನೆ ಸರಿಯಾಗಿ ಸಿಗುತ್ತಿಲ್ಲ ಕೌಶಲ್ಯಾಭಿವೃದ್ಧಿ ಇಲಾಖೆಯವರು ಹೆಚ್ಚಿನ ಮುತುವರ್ಜಿ ವಹಿಸಬೇಕು’ ಎಂದು ತಾ.ಪಂ. ಇಒ ಸಂತೋಷ ಚವ್ಹಾಣ ಹೇಳಿದರು.

ನಾನು ಹಿಂದಿನ ಸಭೆಯಲ್ಲಿ ಅನ್ಯ ರಾಜ್ಯದ ಎಷ್ಟು ಜನ ಪಡಿತರ ಪಡೆದಿದ್ದಾರೆ ಎಂದು ಕೇಳಿದ್ದೇನೆ. ಈಗಲೂ ಅದನ್ನೇ ಕೇಳುತ್ತಿದ್ದೇನೆ ಆದರೆ ಆಹಾರ ಇಲಾಖೆ ಅಧಿಕಾರಿಗಳ ಬಳಿ ಈ ಮಾಹಿತಿಯೇ ಇಲ್ಲ ಎಂದರೆ ಹೇಗೆ? ಎಂದು ಸದಸ್ಯ ವಿಜಯಕುಮಾರ ಗಂಗನಪಳ್ಳಿ ಪ್ರಶ್ನಿಸಿದರು.

ಸದಸ್ಯರಾದ ಶಾಂತಕುಮಾರ ಹಸರಗುಂಡಗಿ, ಲಕ್ಷ್ಮಣ ಅವುಂಟಿ, ಜನಾರ್ದನ ಪಾಟೀಲ, ಗಂಗಾಧರ ಗಡ್ಡಿಮನಿ, ಅರವಿಂದರೆಡ್ಡಿ ದೇಶಮುಖ್ ಮೊದಲಾದವರು ಇದ್ದರು.

ಜೆಸ್ಕಾಂ ಎಇಇ ಕಾಮಣ್ಣ ಇಂಜಳ್ಳಿ, ಸಿಡಿಪಿಒ ಸವಿತಾ, ಆಹಾರ ಇಲಾಖೆಯ ಶಿರಸ್ತೇದಾರ ಉಷಾ, ನಿರೀಕ್ಷಕ ವೀರೇಂದ್ರ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಸುರೇಶ ತೇಗಲತಿಪ್ಪಿ ಮೊದಲಾದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-31-382577446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.