ಚಿಂಚೋಳಿ: ತಾಲ್ಲೂಕಿನ ಸಾಲೇಬೀರನಹಳ್ಳಿ ಗ್ರಾಮದಲ್ಲಿ ರಾಮ ಮತ್ತು ಹನುಮನ ಆರಾಧನೆಯೊಂದಿಗೆ ವಿಶಿಷ್ಟವಾಗಿ ರಾಮನವಮಿ ಗುರುವಾರ ಆಚರಿಸಲಾಯಿತು.

ರಾಮಲಿಂಗೇಶ್ವರನ 6ನೇ ಜಾತ್ರೆ ಜೊತೆಗೆ ನೂತನವಾಗಿ ನಿರ್ಮಿಸಿದ ಹನುಮಾನ ಮಂದಿರದ ಕಳಸಾರೋಹಣವನ್ನು ಹಾರಕೂಡ ಚನ್ನವೀರ ಶಿವಾಚಾರ್ಯರು ನಡೆಸಿದರು.

ಹಾರಕೂಡ ಚನ್ನವೀರ ಶಿವಾಚಾರ್ಯರಿಗೆ ಸಾರೋಟಿನಲ್ಲಿ ಕೂರಿಸಿ ಮುಖ್ಯರಸ್ತೆಗಳಲ್ಲಿ ಕುಂಭ ಕಳಸ ಹಾಗೂ ವಾದ್ಯಮೇಳದ ಮೂಲಕ ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಬೆಳಿಗ್ಗೆ ರಾಮನವಮಿ ಅಂಗವಾಗಿ ರಾಮಲಿಂಗೇಶ್ವರನಿಗೆ ರುದ್ರಾಭಿಷೇಕ ಹಾಗೂ ತೊಟ್ಟಿಲೋತ್ಸವ ನಡೆಯಿತು.

ವೆಂಕಟಗಿರಿ ಶಿಕ್ಷಣ ಸಂಸ್ಥೆಯ ಶಾಂತಬಾಬು ಚಿಂಚೋಳಿಕರ್, ಚಂದ್ರಶೇಖರ ಪಾಟೀಲ, ಜನಾರ್ದನ ಕುಲಕರ್ಣಿ, ಪ್ರಭುಲಿಂಗ ಲೇವಡಿ, ಸಂಗಮನಾಥರೆಡ್ಡಿ ಶೇರಿಕಾರ, ರಾಜೇಂದ್ರರೆಡ್ಡಿ ಶೇರಿಕಾರ, ಮಹಿಬೂಬ ಪಟೇಲ್, ಅಶೋಕಕುಮಾರ ಪಾಟೀಲ, ಜಗನ್ನಾಥರೆಡ್ಡಿ ತುಮಕುಂಟಾ,ಜಗಪ್ಪ ಮಾಡಗಿ, ತುಕಾರಾಮ ಬಲ್ಲೆಮ್, ಚಂದ್ರಶೇಖರ ಲಕಶೆಟ್ಟಿ ಉಪಸ್ಥಿತರಿದ್ದರು.

ಅಫಜಲಪುರ: ‘ಪ್ರಭು ಶ್ರೀರಾಮಚಂದ್ರನ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಎಲ್ಲರ ಬದುಕು ಬಂಗಾರವಾಗಲಿದೆ’ ಎಂದು ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಬಡದಾಳ ಗ್ರಾಮದಲ್ಲಿ ಶ್ರೀರಾಮ ಸೇನಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರ ವತಿಯಿಂದ ರಾಮನವಮಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ತಂದೆಗೆ ಕೊಟ್ಟ ಮಾತಿಗೆ ತಪ್ಪದೆ 14 ವರ್ಷ ವನವಾಸ ಅನುಭವಿಸಿದ ಶ್ರೀರಾಮ, ಅವನೊಂದಿಗೆ ಸಹೋದರ ಲಕ್ಣ್ಮಣ ಕೂಡ ವನವಾಸ ಅನುಭವಿಸಿದ್ದಾನೆ. ಇಬ್ಬರು ಆದರ್ಶಗಳ ಖಣಿಗಳಾಗಿದ್ದಾರೆ. ರಾಮನವಮಿ ದಿನದಂದು ಮಾತ್ರ ರಾಮನನ್ನು ಸ್ಮರಿಸುವ ಬದಲಿಗೆ ನಿತ್ಯ ರಾಮನ ಪೂಜೆ, ಸ್ಮರಣೆ ಮಾಡಬೇಕು’ ಎಂದರು.

ಬುಧವಾರ ರಾತ್ರಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಚನ್ನಮಲ್ಲೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಗುರುವಾರ ಬೆಳಿಗ್ಗೆ ಪ್ರಸಾದ ವಿತರಣೆ ನಡೆಯಿತು. ಸಂಜೆ ಶೋಭಾಯಾತ್ರೆ ಜರುಗಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-31-1569278055

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.