ಚಿಂಚೋಳಿ: ತಾಲ್ಲೂಕಿನ ಶಾದಿಪುರ ಗ್ರಾಮದಲ್ಲಿ ಮನೆ, ಸರ್ಕಾರದ ಕಟ್ಟಡಗಳು ಹೊಂದಿರುವ ಜಮೀನು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪರಭಾರೆ ಮಾಡಿರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ರೈತರು ತಮ್ಮ ಜಮೀನು ಮಾರಾಟ ಮಾಡಲು ಫಾರಂ–10, 11ಇ ನಕಾಶೆ ಕಡ್ಡಾಯವಾಗಿದೆ. ರಿಲೀಸ್ ಡೀಡ್, ಜನರಲ್ ಪವರ್ ಆಫ್ ಅಟಾರ್ನಿ, ಮಾರ್ಟಗೇಜ್ಗೆ ಜಮೀನಿನ ಫಾರಂ–10 ಹಾಗೂ ನಕಾಶೆಯ ಅಗತ್ಯವಿಲ್ಲ. ಜಮೀನಿನ ಮುದ್ರಾಂಕ ಶುಲ್ಕ ಭರಿಸಿದರೆ ರಿಲೀಸ್ ಡೀಡ್, ಜನರಲ್ ಪವರ್ ಆಫ್ ಅಟಾರ್ನಿ, ಮಾರ್ಟಗೇಜ್ಗೆ, ನೋಂದಣಿಗೆ ಅವಕಾಶವಿದೆ. ಇದನ್ನೇ ಬಳಸಿಕೊಂಡಿರುವ ಭೂ ಮಾಫಿಯಾ ಶಾದಿಪುರ ಜನರ ನಿದ್ದೆಗೆಡಿಸಿದೆ.

ಶಾದಿಪುರ ಗ್ರಾಮದ ಸರ್ವೆ ನಂಬರ್ 108.65ರಲ್ಲಿ ಬರುವ 18.24 ಎಕರೆ ಗುಂಟೆ ಜಮೀನಿನಲ್ಲಿ ದಶಕಗಳ ಹಿಂದೆಯೇ ಬಡ ಜನರ ನೂರಾರು ಮನೆಗಳು ಮತ್ತು ಸರ್ಕಾರದ ವಿವಿಧ ಕಟ್ಟಡಗಳು ಕಾಣಸಿಗುತ್ತವೆ. ಈ ಜಮೀನು ರಿಲೀಸ್ ಡೀಡ್ ಮೂಲಕ ಮೂಲ ಮಾಲೀಕರಾದ ಅನುಸೂಜಾ ಕೇಶವರೆಡ್ಡಿ ಅವರಿಂದ ಪ್ರೇಮಸಿಂಗ್ ಎಂಬುವವರು ಮುದ್ರಾಂಕ ಶುಲ್ಕ ಭರಿಸಿ ನೋಂದಣಿ ಮಾಡಿಸಿಕೊಂಡು ತಮ್ಮ ಹೆಸರಿಗೆ ಪಹಣಿ ಅಮಲು ಮಾಡಿಸಿಕೊಂಡಿದ್ದು, ಸಾರ್ವಜನಿಕರು ಹುಬ್ಬೇರಿಸುವಂತಾಗಿದೆ.

ಶಾದಿಪುರ ಗ್ರಾಮಸ್ಥರು, ಬುಧವಾರ ಇಲ್ಲಿನ ತಾಲ್ಲೂಕು ಆಡಳಿತ ಸೌಧಕ್ಕೆ ಬಂದು ಶಾಸಕ ಡಾ.ಅವಿನಾಶ ಜಾಧವ ಎದುರು ಭೂಮಾಫಿಯಾ ನಡೆಸಿದ ಕರಾಳ ಕತೆ ತೆರೆದಿಟ್ಟಿದ್ದಾರೆ.

‘ರಿಲೀಸ್ ಡೀಡ್ ನೋಂದಣಿ ಮಾಡಿಕೊಂಡಿರುವ 18.24 ಜಮೀನಿನಲ್ಲಿ ನೂರಾರು ಮನೆಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಕಟ್ಟಡ, ಗ್ರಾಮ ಆಡಳಿತಾಧಿಕಾರಿ ವಸತಿ ಗೃಹ, ಆರೋಗ್ಯ ಕ್ಷೇಮ ಕೇಂದ್ರ ಹಾಗೂ ಸಮುದಾಯ ಭವನಗಳು, ಕುಡಿಯುವ ನೀರಿನ ಶುದ್ಧೀಕರಣ ಘಟಕ, ಕುಡಿವ ನೀರಿನ ಟ್ಯಾಂಕ್ಗಳು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ಬಸ್ ನಿಲ್ದಾಣ ಒಳಗೊಂಡ ಜಮೀನು ರಿಲೀಸ್ ಡೀಡ್ ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತುಳಜಪ್ಪ ಲಕ್ಷ್ಮಣ ಪೂಜಾರಿ ಶಾಸಕರ ಎದುರು ಅಲವತ್ತುಕೊಂಡರು.

ಶಾದಿಪುರ ಗ್ರಾಮದ ಪ್ರಮುಖರಾದ ತುಕಾರಾಮ, ಶಿವಾಜಿ, ರಾಜು ಜಹಾಗೀರದಾರ, ದಶರಥ ಕಾವಲಿ, ಗೋಪಾಲ, ರಾಜು ಸೋಮಲಾ, ಗೇಮು ಮೊದಲಾದವರು ಇದ್ದರು. ತಕ್ಷಣ ಶಾಸಕರು ಉಪನೋಂದಣಾಧಿಕಾರಿಯನ್ನು ಕರೆಯಿಸಿ ವಿವರ ಪಡೆದರು. ಆಗ ಇದನ್ನು ಸರಿಪಡಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-31-1083914176

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.