ಚಿಂಚೋಳಿ: ‘ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಜನಗಣತಿಯಲ್ಲಿ ಪ್ರತಿಯೊಂದು ಮನೆಯವರು ಸ್ವಯಂ ಗಣತಿಯಲ್ಲಿ ಪಾಲ್ಗೊಂಡು ರಾಷ್ಟ್ರೀಯ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಕರೆ ನೀಡಿದ್ದಾರೆ.

‘ಈ ರಾಷ್ಟ್ರೀಯ ಜನ ಗಣತಿ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಲಿದೆ ಹೀಗಾಗಿ ಮನೆಯ ಮುಖ್ಯಸ್ಥರು ಅಥವಾ ಕುಟುಂಬದ ಸದಸ್ಯರು ತಮ್ಮ ಮನೆ ಹಾಗೂ ಸದಸ್ಯರ ವಿವರವನ್ನು https://se.census.gov.in ಲಿಂಕ್ ತೆರೆದು ಅದರಲ್ಲಿ ಅಗತ್ಯ ಮಾಹಿತಿ ದಾಖಲಿಸಿ ಯಶಸ್ವಿಯಾದ ಮೇಲೆ ಅದರ ಸ್ಕ್ರಿನ್ ಶಾರ್ಟ್ ಹಿಡಿದಿಟ್ಟುಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

‘ಏ.1 ರಿಂದ 15ವರೆಗೆ ಸ್ವಯಂ ಗಣತಿ ನಡೆಯಲಿದೆ. ನಿಮ್ಮ ಮಾಹಿತಿ ಅತ್ಯಂತ ಸುರಕ್ಷಿತವಾಗಿರಲಿದೆ. ಕಾರಣ ನೀವು ಸರಳವಾದ ಮತ್ತು ಸುರಕ್ಷಿತವಾದ ಸ್ವಯಂ ಗಣತಿಯಲ್ಲಿ ನಮ್ಮ ಪಾಲ್ಗೊಂಡು ನಮ್ಮ ಗಣತಿ ನಮ್ಮ ಜವಾಬ್ದಾರಿ ಎಂಬುದು ಮನಗಂಡು ಸ್ಮಾರ್ಟ್ ಫೋನ್ನಲ್ಲಿ ಸ್ವಯಂ ಗಣತಿ ಯಶಸ್ವಿಗೊಳಿಸಬೇಕು. ಗಣತಿದಾರರು ನಿಮ್ಮ ಮನೆಗೆ ಬಂದಾಗ ನೀವು ಹಿಡಿದಿಟ್ಟುಕೊಂಡ ಸ್ಕ್ರಿನ್ ಶಾರ್ಟ್ ತೋರಿಸಿದರೆ ಗಣತಿದಾರರಿಗೂ ಉಪಯುಕ್ತವಾಗಲಿದೆ’ ಎಂದು ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-31-1615431892

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.