ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಿಜೆಪಿಗೆ ಸೇರ್ಪಡೆ

Last Updated 17 ಏಪ್ರಿಲ್ 2021, 8:52 IST
ಅಕ್ಷರ ಗಾತ್ರ

ಕುಂಚಾವರಂ (ಚಿಂಚೋಳಿ): ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ ಅವರು ಕುಂಚಾವರಂನಲ್ಲಿ ಶುಕ್ರವಾರ ಸಂಸದ ಡಾ. ಉಮೇಶ ಜಾಧವ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಕಾಂಗ್ರೆಸ್ ತೊರೆದರು.

ಕುಂಚಾವರಂ ಕಾಂಗ್ರೆಸ್ ಮುಖಂಡರಾದ ಎಲ್. ವೆಂಕಡರೆಡ್ಡಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ. ಗೋಪಾಲ, ಸಂಗಮೇಶ, ಯಲ್ಲಪ್ಪ, ರಾಮ್ಲು,ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು.

ಶಾಸಕರಾದ ಡಾ.ಅವಿನಾಶ ಜಾಧವ, ಮಂಡಲ ಅಧ್ಯಕ್ಷ ಸಂತೋಷ ಗಡಂತಿ ಮೊದಲಾದವರು ಮಾತನಾಡಿದರು.

ಪುರಸಭೆ ಮಾಜಿ ಉಪಾಧ್ಯಕ್ಷ ಶಾಮರಾವ ಕೊರವಿ, ಕಾಂಗ್ರೆಸ್ ಮುಖಂಡ ಕೆ.ಎಂ.ಬಾರಿ, ಯುವ ಮುಖಂಡ ಅಮರ ಲೋಡ್ಡನೂರ ಸೇರಿದಂತೆ ಹಲವರು ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯ ಮೆಚ್ಚಿ ಶಾಸಕ ಅವಿನಾಶ ಜಾಧವ, ಸಂಸದ ಉಮೇಶ ಜಾಧವ, ಭಗವಂತ ಖೂಬಾ ಅವರ ಕೈ ಬಲಪಡಿಸಲು ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂತೋಷ ಗಡಂತಿ ತಿಳಿಸಿದ್ದಾರೆ.

ಮುಖಂಡರಾದ ರಾಮಚಂದ್ರ ಜಾಧವ, ಸಂಜೀವ ಕೊಂಡಂ, ನಾಗರೆಡ್ಡಿ, ಚನ್ನಯ್ಯ ಸೇಠ, ರವಿ ಗೊಲ್ಲ, ಮಾಣಿಕ್ಯಂ, ಸುಶೀಲಕುಮಾರ, ರಾಜು ರಾಠೋಡ, ಜಗದೀಶಸಿಂಗ ಠಾಕೂರ, ವಿಜಯಕುಮಾರ ರಾಠೋಡ, ಪ್ರೇಮಸಿಂಗ ಜಾಧವ, ತುಕಾರಾಮ,ಶ್ರೀಮಂತ ಕಟ್ಟಿಮನಿ, ಶಾಂತುರೆಡ್ಡಿ ನರನಾಳ, ಕಿರಣರೆಡ್ಡಿ ಪಾಟೀಲ, ಶೈಲೇಶ ಹುಲಿ, ಸತೀಶರೆಡ್ಡಿ ತಾಜಲಾಪುರ, ಸುಶೀಲಕುಮಾರ ಇದ್ದರು.

ಕಾಂಗ್ರೆಸ್ ತೊರೆದ ಅಧ್ಯಕ್ಷೆ: ರೇಣುಕಾ ಚವ್ಹಾಣ ಅವರು 5 ವರ್ಷಗಳ ಹಿಂದೆ ನಡೆದ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಶಾದಿಪುರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೂ ಅಂದಿನ ಶಾಸಕ ಉಮೇಶ ಜಾಧವ ಅವರು ಸದಸ್ಯರ ಅಭಿಪ್ರಾಯದ ಮೇರೆಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕಾರಣರಾಗಿದ್ದರು. ನಂತರ ಕೈ ಜತೆಗೆ ಅಂತರ ಕಾಯ್ದುಕೊಂಡಿದ್ದರು. ಕುಂಚಾವರಂ ಜಿ.ಪಂ.ಕ್ಷೇತ್ರದಿಂದ ಕಣಕ್ಕಿಳಿಯುವ ಬಯಕೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT