ಚಿಂಚೋಳಿ: ‘ತಾಲ್ಲೂಕಿನಲ್ಲಿ ಅಕಾಲಿಕ ಮಳೆಯಿಂದ ಉಂಟಾದ ಹಾನಿಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತರುತ್ತೇನೆ’ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಮಾಲಿ ತಿಳಿಸಿದರು.

ತಾಲ್ಲೂಕಿನ ಸಾಲೇಬೀರನಹಳ್ಳಿಯ ಭಗವಂತರಾವ್ ಲಕಶೆಟ್ಟಿ ಅವರ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಈರುಳ್ಳಿ ಬೀಜದ ಚೆಂಡು ಬೆಳೆ ಅಕಾಲಿಕ ಮಳೆ ಹಾಳಾಗಿರುವುದು, ಜೇನು ನೊಣಗಳ ಕೊರತೆಯಿಂದ ತೆನೆಗಳು ಕಾಳು ಕಟ್ಟದಿರುವ ಕುರಿತು ಮಾಹಿತಿ ಪಡೆದರು.

‘ಮಳೆಯಿಂದ ಅಲ್ಲಲ್ಲಿ ಚಿಯಾ ಬೆಳೆ, ಜೋಳದ ಬೆಳೆ ಹಾಗೂ ಜಾನುವಾರುಗಳ ಮೇವಿನ ಕಣಕಿ ಮತ್ತು ಮಾವು ಬೆಳೆ ಹಾಳಾಗಿದೆ. ಈ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತೇನೆ’ ಎಂದರು.

ರೈತ ಮುಖಂಡ ಪ್ರಭುಲಿಂಗ ಲೇವಡಿ ಮಾತನಾಡಿ, ‘ದುಂಬಿಗಳ ಕೊರತೆಯಿಂದ ಪರಾಗಸ್ಪರ್ಶ ನಡೆಯದೇ ಶೇ 50 ಬೆಳೆ ಹಾಳಾಗಿದೆ. ಅಲ್ಲದೆ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ಉಳಿದ ಬೆಳೆಯೂ ಹಾಳಾಗಿದೆ. ಈಗ ಕಾಣುತ್ತಿರುವ ತೆನೆಗಳಲ್ಲಿ ಕಾಳು ಬೆಳೆದರೂ ಅವುಗಳ ಮೊಳಕೆ ಬರುವುದು ಅನುಮಾನ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಗಾರಂಪಳ್ಳಿಯ ರೈತರ ಹೊಲದಲ್ಲಿ ಕಸ್ಕುಟಾ ಕಳೆ ಬಾಧಿತ ತೊಗರಿ ಬೆಳೆಯನ್ನು ಪರಿಶೀಲಿಸಿದರು.

ಮುಖಂಡರಾದ ಅಬ್ದುಲ್ ಬಾಷೀತ್, ಕಾಂಗ್ರೆಸ್ ವಕ್ತಾರ ಶರಣು ಪಾಟೀಲ, ಮುಖಂಡರಾದ ಲಕ್ಷ್ಮಣ ಅವುಂಟಿ, ಗೋಪಾಲ ಗಾರಂಪಳ್ಳಿ, ಮೋಹನ ಗುತ್ತೇದಾರ, ಸಂಗಯ್ಯಸ್ವಾಮಿ, ಬಸವರಾಜ ದೇಶಮುಖ, ಹಣಮಂತ ಪೂಜಾರಿ ಹಾಗೂ ಈರುಳ್ಳಿ ಬೆಳೆಗಾರರು ಇದ್ದರು.

ಮಾವು ಬೆಳೆ ಹಾನಿ ಸಮೀಕ್ಷೆಗೆ ಒತ್ತಾಯ:ತಾಲ್ಲೂಕಿನಲ್ಲಿ ಅಕಾಲಿಕ ಮಳೆಯಿಂದ ತೋಟಗಾರಿಕಾ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಮಾವು, ಟೊಮ್ಯಾಟೊ, ಚಿಯಾ, ಈರುಳ್ಳಿ ಮತ್ತು ಒಣ ಬೇಸಾಯ ಜೋಳ ಮೊದಲಾದ ಬೆಳೆಗಳಿಗೆ ಹಾನಿಯಾದ್ದು, ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ನರಶಿಮ್ಲು ಕುಂಬಾರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಾವು ಬೆಳೆ ಚಿಂಚೋಳಿಯ ಕುಂಚಾವರಂ ಭಾಗದಲ್ಲಿದೆ. ಮಾವಿನ ಮಿಡಿಗಳು ಬಿರುಗಾಳಿಗೆ ಉದುರಿ ರೈತರಿಗೆ ನಷ್ಟ ಉಂಟಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.