ಚಿಂಚೋಳಿ: ತಾಲ್ಲೂಕಿನ ಚಿಮ್ಮಾ ಈದಲಾಯಿ ಗ್ರಾಮದಲ್ಲಿ ಆರಾಧ್ಯದೇವ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಕ್ತದಾನ ಶಿಬಿರ ಹಾಗೂ ಆರೋಗ್ಯ ಉಚಿತ ತಪಾಸಣೆ ಜತೆಗೆ ನೇತ್ರ ತಪಾಸಣೆ ಶಿಬಿರ ಭಾನುವಾರ ನಡೆಯಿತು.

ಸ್ಥಳೀಯ ವೀರಭದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಜಿಮ್ಸ್) ಬ್ಲಡ್ ಬ್ಯಾಂಕಿಗೆ ರಕ್ತದಾನ ಮಾಡಲಾಯಿತು. ಶಾಸಕ ಡಾ.ಅವಿನಾಶ ಉಮೇಶ ಜಾಧವ ಅವರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನಿಗಳಿಗೆ ಹುರಿದುಂಬಿಸಿದರು. 43 ರಕ್ತದಾನ ಮಾಡಿ ಧನ್ಯತೆ ಮೆರೆದರು.

ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹಮದ್ ಗಫಾರ್, ಮೋಘಾ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಲತೀಫ್ ತಾಜಲಾಪುರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಗನ್ನಾಥ ಶೇರಿಕಾರ ಮತ್ತು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಶ್ರೀನಿವಾಸ ಚಿಂಚೋಳಿಕರ್, ಗುಂಡಪ್ಪ ಅವರಾದಿ, ನಂದಕುಮಾರ ಪೋಲಕಪಳ್ಳಿ, ಸಂತೋಷ ಸೂರಪನೋರ್. ವೀರೇಶ, ಉಮೇಶ ಧೂಳಪ್ಪನೋರ್ ನೇತೃತ್ವದಲ್ಲಿ ಶಿಬಿರ ಯಶಸ್ವಿಯಾಗಿ ನಡೆಯಿತು.

ಜಿಮ್ಸ್ ಬ್ಲಡ್ ಬ್ಯಾಂಕಿನ ಡಾ.ಅರೋಸಾ ನಿಶಾತ್, ಶಬ್ಬೀರ್ ಅಹಮದ್, ಯಲ್ಲಪ್ಪ ವಾರಿ, ಜ್ಯೋತಿ, ಮಲ್ಲಿಕಾರ್ಜುನ ಪರೀಟ್, ಬಾಬುರಾವ್ ಮತ್ತು ಖಂಡಪ್ಪ ಅವರು ರಕ್ತವನ್ನು ಪಡೆದುಕೊಂಡರು. ಉದ್ಯಮಿ ಚಂದ್ರಶೇಖರ ಧೂಳಪ್ಪನೋರ್, ಶಿವಶರಣಪ್ಪ ಪಾಟೀಲ, ಮಲ್ಲಿಕಾರ್ಜುನ ಬೆಳಕೇರಿ ಮೊದಲಾದವರು ಆರೋಗ್ಯವನ್ನು ಶಾಸಕ ಡಾ.ಅವಿನಾಶ ಜಾಧವ ಪರೀಕ್ಷಿಸಿ ನೇತ್ರ ತಪಾಸಣೆ ಮಾಡಿಸಿಕೊಂಡವರಿಗೆ ಉಚಿತವಾಗಿ ಔಷಧ ವಿತರಿಸಿದರು. ಮಣೂರು ಆಸ್ಪತ್ರೆ ಮುಖ್ಯಸ್ಥ ಡಾ.ಫಾರುಕ್ ಅವರ ನಿರ್ದೆಶನದ ಮೇರೆಗೆ ತಜ್ಞ ವೈದ್ಯರಾದ ಡಾ.ಹಝೈಫ್, ಡಾ. ಐಮನ್, ಡಾ.ಖಾಜಾ ಹಾಗೂ ಸಿಬ್ಬಂದಿ, ಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ.ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣೆ ನಡೆಸಿದರು. 9 ಜನರನ್ನು ನೇತ್ರ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-31-196384493

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.