ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕುಂಚಾವರಂ ವನ್ಯಜೀವಿ ಧಾಮದಲ್ಲಿ ಬರುವ ಸಂಗಾಪುರ ಅರಣ್ಯದಲ್ಲಿ ವನ್ಯಜೀವಿಗಳನ್ನು ಬೇಟೆಯಾಡಿದ ಆರೋಪದ ಮೇರೆಗೆ ಸಂಗಾಪುರ ಗ್ರಾಮದ ಇಬ್ಬರನ್ನು ಬಂಧಿಸಲಾಗಿದೆ.

ಬುಧವಾರ ರಾತ್ರಿ ಗುರುವಾರ ಬೆಳಗಿನ ಜಾವದ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ಜೆಸ್ಕಾಂ ಮತ್ತು ವನ್ಯಜೀವಿ ಧಾಮದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ವನ್ಯಜೀವಿಗಳ ಬೇಟೆಯಾಡಿದ ಸಂಗಾಪುರ ಗ್ರಾಮದ 40 ವರ್ಷದ ಮಾಣಿಕ ಹರಿಶ್ಚಂದ್ರ ಪವಾರ ಮತ್ತು 30 ವರ್ಷದ ಸುನೀಲ ಧರ್ಮು ರಾಠೋಡ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಬಂಧಿತರಿಂದ ಒಂದು ಮೊಲ ಹಾಗೂ ಬೇಟೆಯಾಡಲು ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ತಿಳಿಸಿದ್ದಾರೆ.

ಸಂಗಾಪುರ ಅರಣ್ಯ ಪ್ರದೇಶದ ಸರ್ವೆ ನಂ.3ರಲ್ಲಿ ಬೈಂಡಿಂಗ್ ವೈರ್ಗೆ ಕೊಂಡಿ ಮಾಡಿ ವಿದ್ಯುತ್ ತಂತಿಗೆ ಹಾಕಿ ವೈರ್ನಲ್ಲಿ ವಿದ್ಯುತ್ ಪ್ರವಹಿಸುವಂತೆ ಮಾಡಿದ್ದರು. ಸುಮಾರು 2 ಕಿ.ಮೀ ಉದ್ದದವರೆಗೆ ವಿದ್ಯುತ್ ಪ್ರವಹಿಸುವ ಬೈಂಡಿಂಗ್ ವೈರ್ ನೆಲದ ಮೇಲೆ ಹಾಕಿ ನಿರ್ದಿಷ್ಟ ಸ್ಥಳದಲ್ಲಿ ಆರೋಪಿಗಳು ಮಲಗಿದ್ದರು. ಪ್ರಾಣಿಗಳಿಗೆ ವಿದ್ಯುತ್ ತಗುಲಿ ಅವು ಬಲಿಯಾದರೆ ತಾನಾಗಿಯೇ ವಿದ್ಯುತ್ ಟ್ರಿಪ್ ಆಗುತ್ತದೆ.

ಈ ಘಟನೆಯಲ್ಲಿ ಒಂದು ಮೊಲ ಹಾಗೂ ಎರಡು ಟಿಟ್ಟಿಭ ಪಕ್ಷಿಗಳು ಮೃತಪಟ್ಟಿದ್ದು, ಅವುಗಳನ್ನು ಹಾಗೂ ಬೇಟೆಗೆ ಬಳಸಿದ ಬೈಂಡಿಂಗ್ ವೈರ್ ಸಹಿತ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ದಾಳಿ ಮಾಡಿದ ಸಿಬ್ಬಂದಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬೇಟೆಯಾಡುತ್ತಿರುವುದು ಬಯಲಾಗಿದೆ. ಆಗ ಪಂಚನಾಮೆ ನಡೆಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಸಿದ್ಧಾರೂಢ ಹೊಕ್ಕುಂಡಿ, ಗಸ್ತು ಅರಣ್ಯ ಪಾಲಕರಾದ ಮಾಳಪ್ಪ ಪೂಜಾರಿ, ಸಂಗನಬಸವ ಡಿಗ್ಗಿ, ಚನ್ನಬಸವ, ದೇವರಾಜ ಗಡ್ಡಿ, ಅರಣ್ಯ ವೀಕ್ಷಕ ಪ್ರಭು, ಮನ್ನು ರಾಠೋಡ, ಲಿಂಬಾಜಿ ರಾಠೋಡ, ಶಿವಾನಂದ ಜೆಸ್ಕಾಂ ಲೈನ್ಮನ್ ಆನಂದ ಎಂ., ಜಗನ್ನಾಥ ಸೇರಿದಂತೆ ಮೊದಲಾದವರು ಇದ್ದರು.

ಜೆಸ್ಕಾಂಗೆ ತಲೆ ನೋವಾಗಿದ್ದ ಬೇಟೆ

ಬೈಂಡಿಂಗ್ ವೈರ್ ಬಳಸಿ ವನ್ಯಜೀವಿಗಳನ್ನು ಬೇಟೆಯಾಡಲು ವಿದ್ಯುತ್ ತಂತಿ ಪ್ರವಹಿಸಿ ನಂತರ ಪ್ರಾಣಿಗೆ ವಿದ್ಯುತ್ ತಗುಲಿದಾಗ ಟ್ರಿಪ್ ಆಗುತ್ತಿತ್ತು. ಇದರಿಂದ ವೆಂಕಟಾಪುರ ಸಂಗಾಪುರ ಜನರು ರೋಸಿ ಹೋಗಿ ಜೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಲೈನ್ ಟ್ರಿಪ್ ಆಗಲು ಏನು ಕಾರಣ ಎಂದು ಜೆಸ್ಕಾಂ ಗುಪ್ತ ಮಾಹಿತಿ ಕಲೆ ಹಾಕಿದಾಗ ವನ್ಯಜೀವಿಗಳ ಬೇಟೆ ಕಾರಣ ಎಂಬುದು ಬಯಲಿಗೆ ಬಂದಿತು. ಇದು ಜೆಸ್ಕಾಂಗೆ ತಲೆನೋವಿಗೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.