ಯಶೋಧೆಗೆ ಬೇಡವಾದ ಮಗಳು!

7

ಯಶೋಧೆಗೆ ಬೇಡವಾದ ಮಗಳು!

Published:
Updated:

ಚಿಂಚೋಳಿ:  ಇಲ್ಲಿನ ಚಾಪ್ಲಾ ನಾಯಕ ತಾಂಡದ ಯಶೋಧಾ ಶಿವಾಜಿ ರಾಠೋಡ್ ಎಂಬುವವರು ತಮ್ಮ 8ನೇ ಹೆರಿಗೆಯಲ್ಲಿ ಜನಿಸಿದ ಹೆಣ್ಣು ಮಗುವನ್ನು ಮನೆಗೆ ಕರೆದೊಯ್ಯಲು ಅವರು ನಿರಾಕರಿಸಿದ್ದಾರೆ. ಈಗ ಆ ಮಗು ಶಿಶುಗೃಹದ ಪಾಲಾಗಿದೆ.

ಸೋಮವಾರ ಬೆಳಿಗ್ಗೆ ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಶೋಧಾ ಅವರ ಹೆರಿಗೆ ಆಗಿದೆ. ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳನ್ನು ಇವರು ಹೊಂದಿದ್ದಾರೆ. ಪತಿ ಶಿವಾಜಿ ರಾಠೋಡ 3 ತಿಂಗಳ ಹಿಂದೆ ಆಕಸ್ಮಿಕವಾಗಿ ಮೃತಪಟ್ಟಿದ್ದರು. ಈಗ ನನಗೆ ಈ ಮಗುವನ್ನು ಸಾಕಲು ಆಗುವುದಿಲ್ಲ ಎಂದು ತಾಯಿ ಯಶೋಧಾ ಪಟ್ಟು ಹಿಡಿದಿದ್ದಾರೆ.

3 ಕೆಜಿ ತೂಕದ ಹೆಣ್ಣು ಮಗು ಆರೋಗ್ಯವಾಗಿದೆ. ಮಗು ಮತ್ತು ತಾಯಿಯನ್ನು ಜಿಲ್ಲಾ ಆಸ್ಪತ್ರೆ ನವಜಾತ ಶಿಶುಗಳ ಆರೈಕೆ ಕೇಂದ್ರದಲ್ಲಿ ದಾಖಲಿಸಲು ಕಳುಹಿಸಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಹಮದ್ ಗಫಾರ ತಿಳಿಸಿದ್ದಾರೆ. 

ಶಿಶುವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಆರೈಕೆ ಮಾಡಿಸಿ ನಂತರ ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸುವುದಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಣ್ಣ ಸಿರಸಗಿ ತಿಳಿಸಿದ್ದಾರೆ. 

‘ಗಂಡು ಮಗುವಾಗಿದ್ದರೆ ಅಮ್ಮ ಸಾಕುತ್ತಿದ್ದಳು. ಆದರೆ, ಹೆಣ್ಣು ಮಗುವಾಗಿರುವುದರಿಂದ ಆಕೆ ನಿರಾಕರಿಸುತ್ತಿದ್ದಾಳೆ’ ಎಂದು ಯಶೋಧಾ ಅವರ ಮಗ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 5

  Angry

Comments:

0 comments

Write the first review for this !