ಕಲಬುರಗಿ: ‘ನಗರದ ಚಿರಾಯು ಆಸ್ಪತ್ರೆಯು ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನ ಬನ್ನೇರುಘಟ್ಟದ ಪೋರ್ಟಿಸ್ ಆಸ್ಪತ್ರೆ ಸಹಯೋಗದಲ್ಲಿ 50 ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸಿದೆ’ ಎಂದು ಆಸ್ಪತ್ರೆಯ ವೈದ್ಯ ಡಾ.ಮಂಜುನಾಥ ದೋಶೆಟ್ಟಿ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಿಡ್ನಿವೈಫಲ್ಯಕ್ಕೆ ಮುಖ್ಯವಾಗಿ ಸಕ್ಕರೆ ಕಾಯಿಲೆ ಕಾರಣ. ವ್ಯಕ್ತಿ ಜೀವನಪರ್ಯಂತ ಡಯಾಲಿಸಿಸ್ ಮಾಡುತ್ತಲೇ ಇರಬೇಕೆಂದೇನಿಲ್ಲ. ಕಿಡ್ನಿಕಸಿ ಮಾಡಿಸಿಕೊಂಡರೆ ಹೊಸಜೀವನ ನಡೆಸಬಹುದು’ ಎಂದು ಕಿಡ್ನಿಕಸಿ ಮಾಡಿಸಿಕೊಂಡವರನ್ನು ಉದಾಹರಿಸುತ್ತ ವಿವರಿಸಿದರು.

ಜಿಲ್ಲೆಯಲ್ಲಿ ಪ್ರತಿವರ್ಷ ಸುಮಾರು 600 ಹೊಸ ರೋಗಿಗಳು ಕಿಡ್ನಿವೈಫಲ್ಯಕ್ಕೆ ತುತ್ತಾಗುತ್ತಾರೆ. ಚಿರಾಯು ಆಸ್ಪತ್ರೆಯಲ್ಲಿಯೇ ಪ್ರತಿ ತಿಂಗಳು 1000ಕ್ಕೂ ಹೆಚ್ಚು ಡಯಾಲಿಸಿಸ್ ಸೇವೆಗಳನ್ನು ನೀಡಲಾಗುತ್ತಿದೆ. ಹೀಗಾಗಿ ಕಿಡ್ನಿ ಸಂಪೂರ್ಣ ವೈಫಲ್ಯಕ್ಕೆ ಒಳಗಾದವರು ಕಿಡ್ನಿಕಸಿ ಮಾಡಿಸಿಕೊಳ್ಳಬಹುದು. ಆಯುಷ್ಮಾನ್ ಭಾರತ್ ಯೋಜನೆಯಡಿ ಸರ್ಕಾರದಿಂದ ಪ್ರಯೋಜನಗಳು ಲಭ್ಯವಿವೆ ಎಂದು ಅವರು ಮಾಹಿತಿ ನೀಡಿದರು.

ಭಾರತೀಯ ಅಂಗಾಂಗ ಕಾನೂನು ಪ್ರಕಾರ ಕಿಡ್ನಿದಾನಿಗಳು ಸಂಬಂಧಿಕರೇ ಆಗಿರಬೇಕಾಗುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಬ್ರೇನ್ ಡೆಡ್ ಆದವರಿಂದ ಪಡೆದಿದ್ದೇವೆ. ಕಿಡ್ನಿವೈಫಲ್ಯ ತಡೆಯಲು ಹೆಚ್ಚು ನೀರು ಕುಡಿಯಿರಿ ಎಂದು ಅವರು ಸಲಹೆ ನೀಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಪೋರ್ಟಿಸ್ ಆಸ್ಪತ್ರೆಯ ಡಾ.ಮೋಹನ ಕೇಶವಮೂರ್ತಿ, ಡಾ.ರವಿ, ಚಿರಾಯು ಆಸ್ಪತ್ರೆ ವೈದ್ಯರಾದ ಡಾ.ಬಸವೇಶ ವೈಜನಾಥ ಪಾಟೀಲ, ಡಾ.ಪೂರ್ಣಿಮಾ ಕರಡಕಲ್, ಡಾ.ತೇಜಸ್ವಿನಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260316-34-610521035

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.