ಚಿತ್ತಾಪುರ: ಪಟ್ಟಣದ ವರುಣ ನಗರದಲ್ಲಿರುವ ಶರಣಬಸವೇಶ್ವರರ ದೇವಸ್ಥಾನದ ಜಾತ್ರಾ ಮಹೋತ್ಸವ, ರಥೋತ್ಸವ ಕಾರ್ಯಕ್ರಮವು ಏ.7ರ ಸಂಜೆ 6.30ಕ್ಕೆ ಪಟ್ಟಣದ ಶಿವಶಂಕರ ಮಠದ ಪೀಠಾಧಿಪತಿ ಶಿವಶಂಕರ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯಲಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ, ಶರಣಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಸೇವಾ ಟ್ರಸ್ಟ್ ಆಶ್ರಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ವಿಶ್ವಾರಾಧ್ಯರ ಪುರಾಣ: ಶಿವಶಂಕರ ಶಿವಾಚಾರ್ಯರ ಪಟ್ಟಾಧಿಕಾರದ ಸುವರ್ಣ ಮಹೋತ್ಸವದ ನಿಮಿತ್ತ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಾ.26 ರಿಂದ ಏ.6ರವರೆಗೆ ಪ್ರತಿದಿನ ಸಂಜೆ ‘ಅಬ್ಬೆತುಮಕೂರಿನ ಸದ್ಗುರು ವಿಶ್ವಾರಾಧ್ಯರ ಪುರಾಣ’ ಕಾರ್ಯಕ್ರಮ ಜರುಗುಗಿತು. ಅಬ್ಬೆತುಮಕೂರಿನ ಗಂಗಾಧರ ಮಹಾಸ್ವಾಮಿ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರತಿ ದಿನ ಪುರಾಣ ಕಾರ್ಯಕ್ರಮದಲ್ಲಿ ಭಕ್ತ ದಂಪತಿಗಳಿಂದ ಶಿವಶಂಕರ ಶಿವಾಚಾರ್ಯರಿಗೆ ನಾಣ್ಯಗಳಿಂದ ತುಲಭಾರ ಮಾಡಿ ಭಕ್ತಿ ಸಮರ್ಪಣೆ ಮಾಡಿದರು. ಶಿವಶಂಕರ ಮಠದಲ್ಲಿ ಪಟ್ಟಾಧಿಕಾರದ ಸುವರ್ಣ ಮಹೋತ್ಸವ ನಿಮಿತ್ತ ಪುರಾಣ ಕಾರ್ಯಕ್ರಮದಲ್ಲಿ ಪ್ರತಿದಿವಸ ಭಕ್ತರು ಮಾಡಿರುವ ತುಲಭಾರ ಮಾಡಿದ ನಾಣ್ಯಗಳನ್ನು ಶಿವಾಚಾರ್ಯರು ದೇವಸ್ಥಾನದ ಕಾರ್ಯಕ್ರಮಗಳಿಗೆ ಸಮರ್ಪಣೆ ಮಾಡಿ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಭಕ್ತರಿಗಾಗಿ ರಾತ್ರಿ ಅನ್ನದಾಸೋಹ ವ್ಯವಸ್ಥೆಗೆ ಜರುಗಿತು.

ಕಲ್ಯಾಣ ಮಂಟಪ ನಿರ್ಮಾಣ: ದೇವಸ್ಥಾನದ ಬಲ ಭಾಗದಲ್ಲಿ ಮದುವೆ, ನಿಶ್ಚಿತಾರ್ಥ ಸೇರಿಂದತೆ ಸಾಂಸ್ಕೃತಿಕ ಕಾರ್ಯಕ್ರಮಳಿಗೆ ಅನುಕೂಲವಾಗುವಂತೆ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಎಡ ಭಾಗದಲ್ಲಿ ಊಟದ ವ್ಯವಸ್ಥೆಗೆಂದು ಬೃಹತ್ ಶೆಡ್ ಹಾಕಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ. ಇದೇ ಕಲ್ಯಾಣ ಮಂಟಪದಲ್ಲಿ ಇಲ್ಲಿಯವರೆಗೆ ಅನೇಕ ಸಭೆ, ಸಮಾರಂಭ, ಮದುವೆ ಕಾರ್ಯಕ್ರಮಗಳು ಜರುಗಿ ತುಂಬಾ ಉಪಯುಕ್ತವಾಗಿದೆ ಎಂದು ಜನರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-31-427120671

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.