ಚಿತ್ತಾಪುರ: ‘ದಾಸೋಹ ಎಂದರೆ ಸಮಾಜ ಸುಧಾರಣೆ ಕಾರ್ಯಕ್ಕೆ ಮುಕ್ತ ಮನಸ್ಸಿನಿಂದ ಪ್ರೋತ್ಸಾಹಿಸುವುದೇ ನಿಜವಾದ ದಾಸೋಹವಾಗಿದೆ. ಅಂತಹ ದಾಸೋಹಕ್ಕೆ ಮುಂದಾಗಬೇಕು’ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಮಹಾಂತಗೌಡ ಪಾಟೀಲ ಹೇಳಿದರು.

ತಾಲ್ಲೂಕಿನ ಭಾಗೋಡಿ ಗ್ರಾಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಭಾನುವಾರ ಆಯೋಜಿಸಿದ್ದ 893ನೇ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲೇಖಕಿ ಪೂಜಾ ಭಂಕಲಗಿ ಉಪನ್ಯಾಸ ನೀಡಿ, ‘ಬಸವಣ್ಣ ಅಂದರೆ ಶೋಷಿತರನ್ನು ಅಪ್ಪಿಕೊಂಡಿದ್ದ ಮಹಾಪುರುಷ. ಬಸವ ತತ್ವದಲ್ಲಿ, ಬಸವ ವಿಚಾರದಲ್ಲಿ, ಬಸವ ಸಂದೇಶದಲ್ಲಿ ಕಾರ್ಲ್ಮಾರ್ಕ್ಸ್, ಡಾ.ಅಂಬೇಡ್ಕರ್, ಮಹಾತ್ಮಾ ಗಾಂಧಿ, ಲೋಹಿಯಾ, ಪೈಗಂಬರ್, ಗುರುನಾನಕ್, ಏಸುಕ್ರಿಸ್ತ ಅವರ ಚಿಂತನೆ, ವಿಚಾರ, ತತ್ವಗಳು ಅಡಗಿವೆ. ಎಲ್ಲಾ ಧರ್ಮಗಳ ಸಾರ ಬಸವ ತತ್ವದಲ್ಲಿ ಕಾಣಬಹುದು’ ಎಂದರು.

‘ವ್ಯಕ್ತಿ ಮತ್ತು ಮೂರ್ತಿ ಪೂಜೆಗಿಂತ ಮಹಾಪುರುಷರ ತತ್ವ ಪಾಲನೆ ಮಾಡಬೇಕು’ ಎಂದರು.

ಗುರುಮಠಕಲ್-ಭಾಗೋಡಿ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣಾ ಸಾಲಿ, ಉಪಾಧ್ಯಕ್ಷ ವಿರೂಪಾಕ್ಷಪ್ಪ ಗಡ್ಡದ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಭಂಕಲಗಿ, ಶರಣಬಸಪ್ಪಗೌಡ ಪಾಟೀಲ ಮಾತನಾಡಿದರು.

ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್, ವೀರಶೈವ ಸಮಾಜದ ಗ್ರಾಮ ಘಟಕದ ಅಧ್ಯಕ್ಷ ಶಿವಕುಮಾರ ಕಲಬುರಗಿ, ಕೋಲಿ ಸಮಾಜದ ತಾಲ್ಲೂಕು ಗೌರವಾಧ್ಯಕ್ಷ ರಾಮಲಿಂಗ ಬಾನರ್, ಮುಖಂಡರಾದ ಬಸವರಾಜ ಪಾಟೀಲ ದಳಪತಿ, ಮುತ್ತಣ್ಣಾ, ಸಾಬಣ್ಣಾ ಸೇರಿ, ಶಂಭುಲಿಂಗ ಏರಿ, ಭೀಮಣ್ಣ ಹೋತಿನಮಡಿ, ಅನಿಲ ವಡ್ಡಡಗಿ, ಚಂದ್ರಶೇಖರ ಉಟಗೂರ, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಪದ್ಮಣ್ಣಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.

ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿಕ್ಷಕ ಬಸವರಾಜ ಯಂಭತ್ನಾಳ ಸ್ವಾಗತಿಸಿದರು. ಮಾಲಾ ಶಿವಕುಮಾರ ಕಲಬುರಗಿ ಅವರು ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-31-1882879979

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.