ಚಿತ್ತಾಪುರ: ವಿದ್ಯುತ್ ಪರಿವರ್ತಕ ಅಳವಡಿಸಿರುವ ಜೋಡು ಕಂಬಗಳು ಬಾಗಿವೆ, ಟಿ.ಸಿಯಿಂದ ವಿದ್ಯುತ್ ಸರಬರಾಜಾಗುವ ಪರಿಕರ, ಕೇಬಲ್ ನೆಲಕ್ಕೆ ತಾಗುತ್ತಿದೆ, ವಿದ್ಯುತ್ ಪರಿವರ್ತಕದ ಸುತ್ತ ಗಿಡಗಂಟಿಗಳು ಬೆಳೆದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ.

‘ತಾಲ್ಲೂಕಿನ ಅಲ್ಲೂರ್(ಬಿ) ಗ್ರಾಮದ ಕೆರೆಯ ಪಕ್ಕದ ಸರ್ವೆ ನಂ.6ರ ಹೊಲದ ಬದುವಿನ ಪಕ್ಕದಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕ ಅಳವಡಿಸಿರುವ ಜೋಡು ಕಂಬಗಳು ಬಾಗಿ ನಿಂತಿವೆ. ಮತ್ತೊಂದು ಕಂಬ ಧರಾಶಾಹಿಯಾಗಲು ಅಣಿಯಾಗಿದೆ. ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಪರಿವರ್ತಕದ ಸುತ್ತಮುತ್ತ ಬೆಳೆದ ಗಿಡಗಂಟಿ ಹಾಗೂ ತಂತಿ ಹಾದು ಹೋಗಿರುವ ಮಾರ್ಗದಲ್ಲಿ ಜಂಗಲ್ ಕಟಿಂಗ್ ಮಾಡಲು ಜೆಸ್ಕಾಂನವರು ಮುಂದಾಗಿಲ್ಲ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹೊಲದ ಬದುವಿನಲ್ಲಿ ಗಿಡಗಂಟಿ ಕಡಿಯಲು ಹೋದಾಗ ಸಂಭವಿಸಿದ ವಿದ್ಯುತ್ ಅವಘಡದಿಂದ ಯುವಕನೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಟಿ.ಸಿ ಹತ್ತಿರ ಮೇಯಲು ಹೋಗಿದ್ದ ಆಕಳು ಮತ್ತು ಎಮ್ಮೆ ಮೃತಪಟ್ಟಿರುವ ಘಟನೆಗಳು ನಡೆದಿದೆ’ ಎಂದು ಗ್ರಾಮದ ದೇವಿಂದ್ರಪ್ಪ ಕಪ್ಪಡಿಗೇರ್, ಜಕ್ಕಪ್ಪ ನಾಟಿಕಾರ, ದ್ಯಾವಪ್ಪ ಕಪ್ಪಡಿಗೇರ್, ನಿಂಗಪ್ಪ ಹೊಸಕಟ್ಟಿ, ತೋಟೇಂದ್ರ ಗುಂಡಾನೋರ್ ಅವರು ಸೋಮವಾರ ‘ಪ್ರಜಾವಾಣಿ’ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

‘ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆಬಾವಿಗಳಿಗೆ ಇದೇ ಟಿ.ಸಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿರುವ ವಿಚಾರ ಗೊತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಕಳೆದ ಹತ್ತು ವರ್ಷಗಳಿಂದ ವಿದ್ಯುತ್ ಟಿ.ಸಿ ಕಂಬಗಳ ದುರಸ್ತಿ ಮಾಡಿಸುತ್ತಿಲ್ಲ. ಹೊಲದಲ್ಲಿ ಕಂಬಗಳು ಬಾಗಿ, ತಂತಿಗಳು ಜೋತು ಬಿದ್ದಿದ್ದದ್ದು, ಈ ಭಯದಿಂದ ಕೂಲಿಕಾರರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-31-115564102

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.