ಚಿತ್ತಾಪುರ: ಪಟ್ಟಣದ ಹಿಂದೂ-ಮುಸ್ಲಿಂ ಭಾವೈಕ್ಯಕ್ಕೆ ಹೆಸರುವಾಸಿಯಾದ ಬಹಾರಪೇಟನಲ್ಲಿರುವ ಸೂಫಿ ಸಂತ ಹಜರತ್ ಚಿತ್ತಾಶಾಹವಲಿ ದರ್ಗಾದ 799ನೇ ಜಾತ್ರೆ (ಉರುಸ್), ಉತ್ಸವ ನಿಮಿತ್ತ ಶನಿವಾರ ನಾಗಣ್ಣಾ ಮಾಸ್ತರ್ ಬಳ್ಳಾ ಅವರ ಮನೆಯಲ್ಲಿ ಸರ್ವಧರ್ಮದ ಮುಖಂಡರಿಂದ, ಮೌಲ್ವಿಗಳಿಂದ ಸಂಪ್ರದಾಯದಂತೆ ಮೊದಲ ಪ್ರಾರ್ಥನೆ ಜರುಗಿತು.

ದರ್ಗಾದ ಮುತವಲ್ಲಿ ಸೈಯದ್ ಮಿನಾಜುದ್ದಿನ್ ಖಾದ್ರಿ ಚಿಸ್ತಿ ಸಜ್ಜಾದ ನಶೀನ್ ಅವರ ನೇತೃತ್ವದಲ್ಲಿ ಬಳ್ಳಾ ಅವರ ಮನೆಯಲ್ಲಿ ಹಿಂದೂ-ಮುಸ್ಲಿಂ ಗಣ್ಯರಿಂದ ‘ಗಲಾಫ್ ಫಾತೇಹಾ’ ಸಂಪ್ರದಾಯದಂತೆ ಸಾಮೂಹಿಕವಾಗಿ ಪ್ರಾರ್ಥನೆ ಕಾರ್ಯಕ್ರಮ ನಡೆಯಿತು.

ಪ್ರಾರ್ಥನೆಯಲ್ಲಿ ಪಟ್ಟಣದ ರಾಜಶೇಖರ ಬಳ್ಳಾ, ಸೈಯದ್ ಸೇಠ್, ಮಲ್ಲಿಕಾರ್ಜುನ ಬಮ್ಮನಳ್ಳಿಕರ್, ಲಕ್ಷ್ಮಿಕಾಂತ ಸಾಲಿ, ಶಾಮ್ ಅಂತಣ್ಣಗೌಡ, ಖಾಸೀಂಸಾಬ್, ಜಾಫರಮಿಯ್ಯಾ ರಾವೂರ, ಗುಂಡಪ್ಪಾ ಇಜಾರ್, ರವಿ ಗೊಬ್ಬೂರ, ಸುರೇಶ ಅಳ್ಳೊಳ್ಳಿ, ಶಫಿ ಶೇಠ್, ವಾಸುದೇವ ಗಂಜಿ, ಸೋಹೇಲ್ ಜುನೈದಿ, ಚಂದ್ರು ಬಳ್ಳಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಬಳ್ಳಾ ಮನೆಯಿಂದ ಗಲಾಫ್ ಮೆರವಣಿಗೆ: ಜಾತ್ರೆ ನಿಮಿತ್ತ ಗಂಧೋತ್ಸವದ (ಸಂದಲ್) ನಂತರ ಹಜರತ್ ಚಿತ್ತಾಶಾಹವಲಿ ದರ್ಗಾದಲ್ಲಿನ ಸೂಫಿ ಸಂತನ ಸಮಾಧಿಗೆ ಹೊದಿಸುವ ಹಸಿರು ಬಟ್ಟೆಯ ‘ಗಲಾಫ್’ ಮೆರವಣಿಗೆಯು ಮಂಗಳ ವಾದ್ಯಮೇಳದೊಂದಿಗೆ ನಾಗಣ್ಣಾ ಮಾಸ್ತರ್ ಮನೆಯಿಂದ ದರ್ಗಾದ ಮುತಾವಲಿ ಮನೆಯವರೆಗೆ ಜರುಗಿತು.

ಸೂಫಿ ಸಂತನ ಸಮಾಧಿಗೆ ಗಂಧಲೇಪನ: ಗಂಧೋತ್ಸವದ ಮೆರವಣಿಗೆಯು ಭಾನುವಾರ ಬೆಳಗಿನ ಜಾವ ದರ್ಗಾಕ್ಕೆ ತಲುಪಿದ ನಂತರ ಜಾತ್ರೆ ಸಂಪ್ರದಾಯದಂತೆ ಹಸಿರು ಬಟ್ಟೆಯ ಗಲಾಫ್, ಹೂವಿನ ಗಲಾಫ್, ಗಂಧ ಲೇಪನ (ಸಂದಲ್), ಫಾತೇಹಾ, ಪ್ರಾರ್ಥನೆ, ದರ್ಗಾದ ಆವರಣದಲ್ಲಿ ಭಕ್ತರಿಗೆ ಪ್ರಸಾದ (ತಬರುಕ್) ವಿತರಣೆ ನಡೆಯಿತು.

ಗಂಧೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಎಸ್ಐ ಮಂಜುನಾಥರೆಡ್ಡಿ, ವಾಡಿ ಪಿಎಸ್ಐ ತಿರುಮಲೇಶ, ರೇಣುಕಾ, ನಾಗರೆಡ್ಡಿ ಗೋಪಸೇನ್, ಮಲ್ಲರೆಡ್ಡಿ ಗೋಪಸೇನ್, ರಾಜಣ್ಣಾ ಕರದಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-31-2081211640

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.