ಚಿತ್ತಾಪುರ: ತಾಲ್ಲೂಕಿನ ಸಾತನೂರು, ಹೊಸೂರು, ಭಂಕಲಗಾ ಗ್ರಾಮಗಳ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಭಾರಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.

ಸಾತನೂರು ಸಮೀಪ ರಾಜ್ಯ ಹೆದ್ದಾರಿ 126ರ ರಸ್ತೆಯ ಮೇಲೆ ನೀಲಗಿರಿ ಗಿಡವೊಂದು ಉರುಳಿ ಬಿದ್ದು ಸಾರಿಗೆ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿರುವ ಘಟನೆ ಜರುಗಿದೆ. ರಭಸವಾಗಿ ಬೀಸಿದ ಬಿರುಗಾಳಿಯಲ್ಲಿ ಅನೇಕ ಗಿಡಮರಗಳ ಟೊಂಗೆಗಳು ಎಲ್ಲೆಂದರಲ್ಲಿ ಮುರಿದು ಬಿದ್ದಿವೆ. ಹೊಲಗಳಲ್ಲಿ ಕಣಕಿ ಬಣಮಿಗಳು ಚೆಲ್ಲಾಪಿಲ್ಲಿಯಾಗಿ ಹರಡಿವೆ.

ಒಂದು ಗಂಟೆ ಸುರಿದ ಮಳೆಯಿಂದ ಹೊಲಗಳಲ್ಲಿ ನೀರು ಹರಿಯುವ ದೃಶ್ಯ ಗೋಚರಿಸಿದೆ. ಬಿಸಿಲಿನ ಶಕೆಯ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಸಂಜೆ ಸುರಿದ ಧಾರಾಕಾರ ಮಳೆಯಿಂದ ತಂಪು ವಾತಾವರಣ ನಿರ್ಮಾಣಗೊಂಡು ಬಿಸಿಲಿಬ ಬೇಗೆಯಿಂದ ಬಿಡುಗಡೆಯ ನಿರಾಳತೆ ಜನರಲ್ಲಿ ಮೂಡಿದೆ.

ಭಾರಿ ಬಿರುಗಾಳಿಗೆ ಹೊಲಗಳಲ್ಲಿ ಕಣಿಕೆಯ ಬಣಮಿಗಳು ಗಾಳಿಗೆ ಹಾರಿ ಹೋಗಿದ್ದು ರೈತರಲ್ಲಿ ತೀವ್ರ ಆತಕ ಮೂಡಿಸಿದೆ. ಹೊಲದ ತುಂಬಾ ಕಣಕಿ ಹರಡಿಕೊಂಡಿದೆ. ಚಿತ್ತಾಪುರ ಪಟ್ಟಣದಲ್ಲಿ ತುಂತುರು ಮಳೆ ಬಂದಿದೆ. ತಾಲ್ಲೂಕಿನ ವಿವಿಧೆಡೆ ಲಘು ಮಳೆಯಾಗಿದ್ದು ಇಳೆಗೆ ತಂಪಾಗಿ ಬಿಸಿಲಿನ ತಾಪಕ್ಕೆ ಕಡಿವಾಣ ಬಿದ್ದು ಜನರು ನೆಮ್ಮದಿಯ ನಿಟ್ಟುಸಿರುವ ಬಿಡುವಂತ್ತಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-31-1386728011

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.