ಚಿತ್ತಾಪುರ: ತಾಲ್ಲೂಕಿನ ಕಮರವಾಡಿ ಗ್ರಾಮದಲ್ಲಿನ ಶರಣಬಸವೇಶ್ವರ ದೇವಸ್ಥಾನದ ಪ್ರಥಮ ರಥೋತ್ಸವ ಮತ್ತು ಜಾತ್ರೆ, ಶರಣಬಸವೇಶ್ವರರ ಪುರಾಣ ಸಮಾರೋಪ ಸಮಾರಂಭವು ಮೇ 14ರಂದು ವಿಜೃಂಭಣೆಯಿಂದ ಜರುಗಲಿದೆ.

ಕಳೆದ 28 ವರ್ಷಗಳ ಹಿಂದೆ ಗ್ರಾಮದ ಯುವಕರು ಗ್ರಾಮಸ್ಥರ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರಿಂದ ದೇಣಿಗೆ ಸಂಗ್ರಹಿಸಿ ಅಂದಾಜು ₹60 ಲಕ್ಷ ವೆಚ್ಚದಲ್ಲಿ ಶರಣಬಸವೇಶ್ವರ ದೇವಾಲಯವನ್ನು ಕಳೆದ 2022ರವರೆಗೆ ನಿರಂತರ ಜೀರ್ಣೋದ್ಧಾರ ಮಾಡಿದ್ದಾರೆ. ಕಳಸಾರೋಹಣ ನೆರವೇರಿಸಿ ದೇವಸ್ಥಾನದ ಉದ್ಘಾಟನೆ ನೆರವೇರಿಸಲಾಗಿದೆ. 28 ವರ್ಷಗಳಿಂದ ಇಲ್ಲಿಯವರೆಗೆ ಪ್ರತಿ ವರ್ಷ ಮೇ 13ರಂದು ಕೇವಲ ಶರಣಬಸವೇಶ್ವರ ಪಲ್ಲಕ್ಕಿ ಉತ್ಸವ ಮಾತ್ರ ಮಾಡಿಕೊಂಡು ಬರಲಾಗಿದೆ ಎಂದು ಗ್ರಾಮಸ್ಥರು ಹೆಮ್ಮೆಯಿಂದ ಹೇಳುತ್ತಾರೆ.

14ರಂದು ಬೆಳಿಗ್ಗೆ 6.45ಕ್ಕೆ ನೂತನ ರಥದ ಪೂಜೆ, ಹೋಮ ನಡೆಯಲಿದೆ. ಗ್ರಾಮದ ಶಿವಬಸಪ್ಪಗೌಡ ಮಾಲಿಪಾಟೀಲ ಅವರ ಮನೆಯಿಂದ ಕುಂಭ, ಅಯ್ಯಣ್ಣಗೌಡ ಪೊಲೀಸ್ ಪಾಟೀಲ ಅವರ ಮನೆಯಿಂದ ಕಳಸ, ಭೀಮಾಶಂಕರ ಇಂದೂರ ಅವರ ಮನೆಯಿಂದ ರಥದ ಹಗ್ಗ (ಮಿಣಿ), ಧೂಳಪ್ಪ ಯರಗಲ್ ಅವರ ಮನೆಯಿಂದ ನಂದಿಕೋಲು, ಸಿದ್ದಲಿಂಗಯ್ಯ ಸ್ವಾಮಿ ಮನೆಯಿಂದ ಪುರವಂತರ ಮೆರವಣಿಗೆ ಸಂಪ್ರದಾಯದಂತೆ ದೇವಸ್ಥಾನದವರೆಗೆ ನಡೆಯಲಿದೆ.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಎಸ್.ಅಪ್ಪ ಹಾಗೂ ದಾಕ್ಷಾಯಣಿ ಎಸ್.ಅಪ್ಪ ಅವರು ಸಂಜೆ 6.30ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಪುರಾಣ ಸಮಾರೋಪ: ಜಾತ್ರೆ ರಥೋತ್ಸವ ನಿಮಿತ್ತ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶರಣಬಸವೇಶ್ವರರ ಪುರಾಣ ಆಯೋಜನೆ ಮಾಡಲಾಗಿದ್ದು, ಪುರಾಣ ಸಮಾರೋಪ ನಡೆಯಲಿದೆ. ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ರಾಜಕೀಯ ಗಣ್ಯರು ಆಗಮಿಸಲಿದ್ದಾರೆ ಎಂದು ಗ್ರಾಮದ ಮುಖಂಡ ಭೀಮಾಶಂಕರ ಇಂದೂರ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-31-1873632731

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.