ವಾಡಿ: ಅಲಹಳ್ಳಿ ಉಪಕೇಂದ್ರಕ್ಕೆ ಚಿತ್ತಾಪುರದಿಂದ ಬರುವ ಮುಖ್ಯ 33 ಕೆ.ವಿ ಲೈನ್ ಸಂಪೂರ್ಣ ಶಿಥಿಲಗೊಂಡಿದ್ದು, ಸಣ್ಣ ಮಳೆ, ಗಾಳಿಗೂ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಸಂಜೆ ವೇಳೆ ಮಳೆ, ಗಾಳಿ ಬೀಸಿದರೆ ಇಡೀ ರಾತ್ರಿ 22 ಹಳ್ಳಿಗಳು ಮತ್ತು 23 ತಾಂಡಾಗಳಲ್ಲಿ ಕತ್ತಲು ಆವರಿಸಿ ಜನರು ಜಾಗರಣೆ ಮಾಡುತ್ತಾರೆ.

ಮುಖ್ಯ ಮಾರ್ಗ ನಿರ್ವಹಣೆ ಮಾಡದೇ ಜೆಸ್ಕಾಂ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸುವ ಸಾರ್ವಜನಿಕರು, ಇಡೀ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲೈನ್ಮ್ಯಾನ್ ಒಬ್ಬರನ್ನು ಇಲ್ಲಿ ಉಪಕೇಂದ್ರದ ಶಾಖಾಧಿಕಾರಿಯನ್ನಾಗಿ ಇಲಾಖೆ ನೇಮಿಸಿದ್ದು, ವಿದ್ಯುತ್ ನಿರ್ವಹಣೆಗೆ ಸವಾಲಾಗಿದೆ.

ಚಿತ್ತಾಪುರದಿಂದ ಅಲಹಳ್ಳಿಗೆ ಬರುವ ಈ ಮುಖ್ಯ ಲೈನ್ ಬಹಳ ದೂರ ಕ್ರಮಿಸುವುದರಿಂದ ದಾರಿಯುದ್ದಕ್ಕೂ ಹಳೆಯ ಕಂಬಗಳು ಅಥವಾ ತುಕ್ಕು ಹಿಡಿದ ತಂತಿಗಳಿಂದ ವೋಲ್ಟೇಜ್ ಕುಸಿಯುತ್ತಿದೆ. ಹೆಚ್ಚಾಗಿ ಹೊಲಗದ್ದೆಗಳ ಮೂಲಕ ಲೈನ್ ಹಾದು ಬಂದಿದ್ದು, ಮರಗಳ ಕೊಂಬೆಗಳು ತಗುಲಿ ಮತ್ತು ಲೈನ್ ಕ್ರಾಸ್ ಆಗಿ ಪದೇಪದ ‘ಮೇನ್ ನೈಲ್ ಟ್ರಿಪ್’ ಆಗುತ್ತಿದೆ.

ಜತೆಗೆ ಹಳೆಯ ಕಾಲದ ಇನ್ಸುಲೇಟರ್ಗಳು ಈ ಲೈನ್ನಲ್ಲಿದ್ದು ಮಳೆಗಾಲದಲ್ಲಿ ‘ಸ್ಪಾರ್ಕ್’ ಉಂಟಾಗಿ ಇಡೀ ಉಪಕೇಂದ್ರಕ್ಕೆ ಸಂಪರ್ಕ ಕಡಿತಗೊಳ್ಳುತ್ತಿದೆ. ವಿದ್ಯುತ್ ಪೂರೈಕೆ ಮಾರ್ಗದುದ್ದಕ್ಕೂ ಜಂಗಲ್ ಕಟಿಂಗ್ ನಡೆಯದ ಕಾರಣ ಸಣ್ಣ ಗಾಳಿಗೂ ಮೇನ್ ಫೀಡರ್ ಆಫ್ ಆಗುತ್ತಿದೆ. ಇದರಿಂದ ಉಪಕೇಂದ್ರದ ಕೆಳಗಿನ ಎಲ್ಲಾ ಹಳ್ಳಿಗಳು ಮತ್ತು ತಾಂಡಾಗಳು ದಿನಗಟ್ಟಲೆ ಕತ್ತಲಲ್ಲಿ ಕಳೆಯುವಂತಾಗಿದೆ. ಭಾನುವಾರ ಸಂಜೆ ಮತ್ತು ರಾತ್ರಿ ಒಟ್ಟು 8 ಗಂಟೆ ಮೇನ್ ಲೈನ್ ಆಫ್ ಆಗಿದ್ದರಿಂದ ಗ್ರಾಮಗಳು ಕತ್ತಲಲ್ಲಿ ಮುಳುಗಿ ಜನರು ತೊಂದರೆ ಎದುರಿಸಿ ಆಡಳಿತಕ್ಕೆ ಹಿಡಿಶಾಪ ಹಾಕಿದರು. ಸೋಮವಾರವೂ ಈ ಸಮಸ್ಯೆ ಮುಂದುವರಿಯಿತು. ವಿದ್ಯುತ್ ಆಧುನೀಕರಣಕ್ಕೆ ಕೋಟಿಗಟ್ಟಲೆ ಹಣ ವ್ಯಯಿಸಿದರೂ ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ ಎನ್ನುವುದೇ ಜನರ ಬೇಸರಕ್ಕೆ ಕಾರಣವಾಗಿದೆ. ಮುಖ್ಯ ಮಾರ್ಗವನ್ನು ಆಧುನೀಕರಣಗೊಳಿಸಬೇಕು. ಫೀಡರ್ ದುರಸ್ತಿ, ಇನ್ಸುಲೇಟೆಡ್ ವೈರ್ ಅಳವಡಿಕೆ, ಮರಗಿಡಗಳು ಹೆಚ್ಚಿರುವ ಕಡೆ ಹಳೆಯ ತಂತಿಗಳ ಬದಲು ‘ಏರಿಯಲ್ ಬಂಚ್ಡ್ ಕೇಬಲ್’ ಅಳವಡಿಸಿದರೆ ಗಾಳಿ-ಮಳೆಗೆ ಶಾರ್ಟ್ ಸರ್ಕಿಟ್ ತಡೆಯಬಹುದಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-31-1974990455

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.