ಜೇವರ್ಗಿ: ‘ಕಾಂಗ್ರೆಸ್ನಿಂದ ಕೆಕೆಆರ್ಡಿಬಿಯಲ್ಲಿ ಸಾವಿರಾರು ಕೋಟಿ ಹಣ ಲೂಟಿಯಾಗಿದೆ. ₹500 ಕೋಟಿಯನ್ನು ತೆಲಂಗಾಣ ಚುನಾವಣೆಗೆ ಬಳಕೆ ಮಾಡಿದ್ದಾರೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದರು.

ತಾಲ್ಲೂಕಿನ ಚನ್ನೂರ, ಹರವಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಾಳಾದ ಬೆಳೆಗಳನ್ನು ಮಂಗಳವಾರ ವೀಕ್ಷಿಸಿ ಅವರು ಮಾತನಾಡಿದರು.

‘ಪ್ರಸಕ್ತ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದ ತೊಗರಿ ಹಾಗೂ ಹತ್ತಿ ಬೆಳೆಗಳು ಸಂಪೂರ್ಣ ಹಾಳಾಗಿದ್ದು ರೈತರಿಗೆ ಸಮರ್ಪಕ ಪರಿಹಾರ ನೀಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ’ ಎಂದರು.

‘ವಕ್ಫ್ ಬೋರ್ಡ್ನಿಂದ ಕೇವಲ ಖಬರಸ್ತಾನ, ಮಸೀದಿ, ದರ್ಗಾಗಳ ನಿರ್ವಹಣೆ ಮಾತ್ರ ಆಗುತ್ತದೆ. ಆದರೆ ರೈತರಿಗೆ ನೋಟಿಸ್ ನೀಡಿ ಜಮೀನುಗಳನ್ನು ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ದೇವಸ್ಥಾನಗಳು ಮಠ ಮಂದಿರಗಳು ವಕ್ಫ್ಬೋರ್ಡ್ಗೆ ಸೇರಿದ್ದು ಎಂದು ನೋಟಿಸ್ ನೀಡುವುದು ಯಾವ ನ್ಯಾಯ? ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ಬಗ್ಗೆ ಚಿಂತನೆ ಮಾಡಬೇಕು’ ಎಂದರು.

‘ತಾಲ್ಲೂಕಿನ ಶಾಸಕರು ಬೆಂಗಳೂರಿನಲ್ಲಿ ಕುಳಿತು ದರ್ಬಾರ್ ಮಾಡದೇ ಕ್ಷೇತ್ರದಲ್ಲಿ ಇದ್ದು ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಹ ಕೆಲಸ ಮಾಡಬೇಕು. ಅವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ’ ಎಂದು ಶಾಸಕ ಅಜಯ್ಸಿಂಗ್ ವಿರುದ್ಧ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಶಾಸಕರಾದ ಬಸವರಾಜ ಮತ್ತಿಮಡು, ಶಾಸಕ ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ಮಲ್ಲಿನಾಥಗೌಡ ಯಲಗೋಡ, ಹಳ್ಳೆಪ್ಪಚಾರ್ಯ ಜೋಶಿ, ಶೋಭಾ ಬಾಣಿ, ಮರೆಪ್ಪ ಬಡಿಗೇರ, ಬಿಜೆಪಿ ತಾಲ್ಲೂಕಾಧ್ಯಕ್ಷ ದೇವೀಂದ್ರಪ್ಪ ಮುತ್ತಕೋಡ, ಬಸವರಾಜ ಪಾಟೀಲ ಕುಕನೂರ, ಪೀರಣ್ಣ ಗುತ್ತಾ ಸೇರಿದಂತೆ ಅನೇಕರು ಇದ್ದರು.

ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಕೃಷಿ ಇಲಾಖೆ ಉಪ ನಿರ್ದೆಶಕ ಸೋಮಶೇಖರ ಬಿರಾದಾರ, ಜೇವರ್ಗಿ ಕೃಷಿ ಅಧಿಕಾರಿ ಪವನಕುಮಾರ ಕಟ್ಟಿಮನಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.