ಗುರುವಾರ , ನವೆಂಬರ್ 21, 2019
27 °C

ಕಿರುಕುಳಕ್ಕೆ ಕಾನ್‌ಸ್ಟೆಬಲ್‌ ಪತ್ನಿ ಬಲಿ

Published:
Updated:

ಕಲಬುರಗಿ: ಪೊಲೀಸ್ ಕಾನ್‌ಸ್ಟೆಬಲ್‌ ಆಗಿರುವ ಪತಿಯ ಕಿರುಕುಳ ತಾಳದೇ ಪತ್ನಿಯೊಬ್ಬಳು ಸಣ್ಣೂರ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೀಲಾಬಾಯಿ ಚಿನ್ನಾರಾಠೋಡ್ (28) ಸಾವಿಗೆ ಶರಣಾದವರು. ಸುಭಾಷ್ ಎಂಬುವವರು ಮಾಡಬೂಳ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿದ್ದು ಸಣ್ಣೂರದಲ್ಲಿ ವಾಸವಾಗಿದ್ದರು. ವಿನಾಕಾರಣ ನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಕಳೆದ 29ರಂದು ಮನೆಯಲ್ಲಿ ವಿಷ ಸೇವಿಸಿದ್ದರು. ನಗರದ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಶನಿವಾರ ಕೊನೆಯುಸಿರೆಳೆದಿದ್ದಾಳೆ. ನೀಲಾಬಾಯಿ ವಿಷ ಸೇವಿಸಿದ ಮಾರನೇ ದಿನದಿಂದ ಸುಭಾಷ್ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಾಗಿದೆ. ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)