ಸುಳ್ಳು ಸಾಕ್ಷಿ ಹೇಳಿಸಿ ಜಾಮೀನು; ಆರೋಪಿಗೆ ಶಿಕ್ಷೆ

7

ಸುಳ್ಳು ಸಾಕ್ಷಿ ಹೇಳಿಸಿ ಜಾಮೀನು; ಆರೋಪಿಗೆ ಶಿಕ್ಷೆ

Published:
Updated:

ಕಲಬುರ್ಗಿ: ಸುಳ್ಳು ಸಾಕ್ಷಿ ಹೇಳಿಸಿ ಜಾಮೀನು ಪಡೆದಿದ್ದ ಆರೋಪಿ, ಸಿದ್ಧಾರ್ಥ ನಗರದ ನಿವಾಸಿ ಭೀಮಾಶಂಕರ ಚಲವಾದಿಗೆ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯವು 3 ವರ್ಷ ಜೈಲು ಶಿಕ್ಷೆ ವಿಧಿಸಿ ಈಚೆಗೆ ತೀರ್ಪು ನೀಡಿದೆ.

ಶರಣ ಶಿರಸಗಿಯ ಶರಣಬಸಪ್ಪ ಸಗರ ಮತ್ತು ಭೀಮಾಶಂಕರ ಚಲವಾದಿ ಇವರ ಮೇಲೆ 1ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಹುಣಸಿ ಹಡಗಿಲ್‌ನ ಸಿದ್ದಪ್ಪ ವಾಕಡೆ ಎಂಬುವರು ಬಸವಂತರಾಯ ಭೈರಾಮಡಗಿ ಅವರ ಹೆಸರಿನಲ್ಲಿದ್ದ ಜಮೀನಿನ ಪಹಣಿ ಪತ್ರವನ್ನು ಪಡೆದುಕೊಂಡು, 1ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಿ ತಾನೇ ಬಸವಂತರಾಯ ಭೈರಾಮಡಗಿ ಎಂದು ಸುಳ್ಳು ಹೇಳಿ ಭೀಮಾಶಂಕರ ಚಲವಾದಿ ಮತ್ತು ಶರಣಬಸಪ್ಪ ಸಗರ ಅವರಿಗೆ ಜಾಮೀನು ನೀಡಿ, ನ್ಯಾಯಾಲಯಕ್ಕೆ ಮೋಸ ಮಾಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಅರವಿಂದ ಎನ್.ವಿ. ಅವರು ಆರೋಪಿ ಭೀಮಾಶಂಕರ ಚಲವಾದಿ ಅವರಿಗೆ 3 ವರ್ಷ ಜೈಲು ಶಿಕ್ಷೆ, ₹10 ಸಾವಿರ ದಂಡ ವಿಧಿಸಿದರು.

ಜಾಮೀನು ನೀಡಿದ ಆರೋಪಿ ಸಿದ್ದಪ್ಪ ವಾಕಡೆ ಪರಾರಿಯಾಗಿದ್ದು, ಇವರ ಮೇಲೆ ಇನ್ನೊಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇನ್ನೊಬ್ಬ ಆರೋಪಿ ಶರಣಬಸಪ್ಪ ಸಗರ ಎಂಬುವರು ಪ್ರಕರಣದ ವಿಚಾರಣೆ ಸಮಯದಲ್ಲಿ ಮೃತಪಟ್ಟಿದ್ದಾರೆ.

ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ವೈ.ಜಿ.ತುಂಗಳ ವಾದ ಮಂಡಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !