ಮಂಗಳವಾರ, ಜೂಲೈ 7, 2020
28 °C

ಮಾನವೀಯ ತುಡಿತದಿಂದ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಾಣು ಉಪಟಳ ಆರಂಭವಾದಾಗಿಂದ ಎಲ್ಲ ಪೊಲೀಸರೂ ಉಸಿರು ಬಿಗಿ ಹಿಡಿದು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ನಾನೂ ಒಬ್ಬಳು. ಪ್ರತಿ ದಿನ ಕೆಲಸಕ್ಕೆ ಹೋಗುವ ಮುನ್ನವೇ ಇಂದಿನ ಜವಾಬ್ದಾರಿ ಏನು? ಅದರಾಚೆಗೂ ನಾನು ಹೆಚ್ಚಿಗೆ ಏನು ಮಾಡಲು ಸಾಧ್ಯವಿದೆ ಎಂದು ಲೆಕ್ಕ ಹಾಕಿಕೊಂಡು ಹೋಗುತ್ತೇನೆ. ವಿವಿಧ ಕ್ವಾರಂಟೈನ್‌ ಕೇಂದ್ರಗಳಲ್ಲಿ ನಿಯೋಜಿಸಿದ ಪೊಲೀಸ್‌ ಸಿಬ್ಬಂದಿಯ ಕೆಲಸ ಪರಿಶೀಲನೆ, ಜನರ ಮನವೊಲಿಸುವುದು, ಪಾಸಿಟಿವ್ ಪ್ರಕರಣ ಕಂಡುಬಂದಲ್ಲಿ ಸೂಕ್ತ ವ್ಯವಸ್ಥೆ ಮಾಡುವುದು ದೈನಂದಿನ ಕೆಲಸಗಳು.

ಇದರಾಚೆಗೂ ನನ್ನೊಳಗಿನ ಮಾನವೀಯ ತುಡಿತ ನಿಲ್ಲುವುದಿಲ್ಲ. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬರೂ ಹೆಚ್ಚಿಗೆ ಶ್ರಮ ಹಾಕಿದರೆ ಆದಷ್ಟು ಬೇಗ ಕೊರೊನಾ ಹೊರಗಟ್ಟಲು ಸಾಧ್ಯ. ಬರವಣಿಗೆ ಹಾಗೂ ಗಾಯನ ಅಭ್ಯಾಸವೂ ನನಗಿದೆ. ಆ ಕ್ಷೇತ್ರದಲ್ಲಿನ ಸಾಧನೆಗೆ ಬಂದ ಸಾವಿರಾರು ರೂಪಾಯಿಗಳನ್ನು ಹಾಗೇ ಇಟ್ಟಿದ್ದೆ. ಅದೇ ಹಣದಿಂದ ದಿನಸಿಗಳನ್ನು ಕಳೆದ ಎರಡೂವರೆ ತಿಂಗಳಿಂದ ವಿತರಿಸುತ್ತಿದ್ದೇನೆ. ಇದು ನನಗೆ ಖುಷಿ ಕೊಡುತ್ತಿದೆ. ಅನಾಥಾಶ್ರಮ, ವೃದ್ಧಾಶ್ರಮ, ಬಾಲ ಮಂದಿರಗಳಲ್ಲಿ ಸೇವೆ ನೀಡುವುದು ಎಂದಿನ ಖಯಾಲಿ. ಕೊರೊನಾದಲ್ಲೂ ಅದನ್ನು ಮುಂದುವರಿಸಿದ್ದೇನೆ. ಪ್ರತಿ ದಿನ ನನ್ನ ಅಡುಗೆ, ಉಡುಗೆ ಜವಾಬ್ದಾರಿ ನನ್ನದೇ. ಮನೆಯಲ್ಲೂ ಸುರಕ್ಷಿತ ಅಂತರ ಅನಿವಾರ್ಯವಾಗಿದೆ.

–ಯಶೋದಾ ಕಟಕೆ, ಎಎಸ್‌ಐ, ಸೈಬರ್‌ ಕ್ರೈಂ ವಿಭಾಗ, ಕಲಬುರ್ಗಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು