ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಿಂಕ್‌ಥಾನ್ ವಿಡಿಯೊ ಸಂವಾದ ಯಶಸ್ವಿ

Last Updated 25 ಮೇ 2021, 5:59 IST
ಅಕ್ಷರ ಗಾತ್ರ

ಕಲಬುರ್ಗಿ: ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೊಖಂಡೆ ಅವರ ಮಾರ್ಗದರ್ಶದಲ್ಲಿ ಮನೋಮಯ ಪ್ರೊಡಕ್ಷನ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೈಭವ ಕೇಸ್ಕರ್‌ ಅವರು ಆಯೋಜಿಸಿದ ಮೊಟ್ಟ ಮೊದಲ ಥಿಂಕ್‌ಥಾನ್ (ಹ್ಯಾಕ್‍ಥಾನ್) ವಿಡಿಯೊ ಸಂವಾದದ ಮೂಲಕ ಯಶಸ್ವಿಯಾಗಿ ನಡೆಯಿತು.

ಸಂವಾದಲ್ಲಿ ಪಾಲ್ಗೊಂಡ ಎಲ್ಲ ಅಭ್ಯರ್ಥಿಗಳ ಪ್ರಸ್ತುತಿಗಳನ್ನು ಕೇಳಿದ ಸ್ನೇಹಲ್‌ ಅವರು, ‘ಬಂದಿರುವ ಪ್ರಸ್ತುತಿಗಳಲ್ಲಿ ಕೆಲವನ್ನು ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಅಳವಡಿಸಬಹುದು. ಈ ರೀತಿಯ ಆನ್‍ಲೈನ್ ಹ್ಯಾಕ್‍ಥಾನ್ ಹಾಗೂ ಸಕಾರಾತ್ಮಕ ಪರಿಣಾಮ ಬರುವಂತಹ ಚಟುವಟಿಕೆಗಳನ್ನೂ ಆಯೋಜಿಸಬೇಕು’ ಎಂದು ಹೇಳಿದರು.

ಸಂವಾದದಲ್ಲಿ ಪ್ರೇಮಲತಾ, ನರೇಶ, ಪ್ರಶಾಂತ್ ಶಾಬಾದಕರ್, ಸುನೀಲ್ ವಿಭೂತೆ, ಆದರ್ಶ ಗದಾಲೆ, ಪವನ್ ಎಂ., ಸಂಜಯ ಗಸ್ತಿ, ಮಧುಶ್ರೀ ದೇಶಪಾಂಡೆ, ವಿಶಾಲ್ ಗದಾಲೆ ಅವರು ಭಾಗವಹಿಸಿ ಯಶಸ್ವಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT