ಭಾನುವಾರ, ಜೂಲೈ 12, 2020
29 °C

23 ಪಾಸಿಟಿವ್‌, 39 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಮಹಾರಾಷ್ಟ್ರದಿಂದ ಮರಳಿದ ಒಬ್ಬ ಬಾಲಕ ಹಾಗೂ ಬಾಲಕಿಯೂ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ 23 ಜನರಿಗೆ ಕೊವಿಡ್‌–19 ದೃಢಪಟ್ಟಿದೆ.‌ ಇದರಲ್ಲಿ ಬಹುಪಾಲು ಜನ ನಗರದ ವಿವಿಧ ಬಡಾವಣೆಗಳ ನಿವಾಸಿಗಳೇ ಆಗಿದ್ದಾರೆ. ಇದರಿಂದಾಗಿ ಸಾರ್ವಜನಿಕರಲ್ಲಿ ಮತ್ತಷ್ಟು ಭೀತ ಹೆಚ್ಚಾಗಿದೆ.

ಸೋಂಕಿತರಲ್ಲಿ 4 ವರ್ಷದ ಒಬ್ಬ ಬಾಲಕ, 9 ವರ್ಷದ ಒಬ್ಬ ಬಾಲಕಿಯೂ ಸೇರಿದ್ದಾರೆ. 50 ವರ್ಷದೊಳಗಿನ ಏಳು ಮಂದಿ ಮಹಿಳೆಯರು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 66 ವರ್ಷದ ವೃದ್ಧ, 20 ವರ್ಷದೊಳಗಿನ ನಾಲ್ವರು ಯುವಕರೂ ಸೇರಿದ್ದಾರೆ. ಪುರುಷರಲ್ಲಿ ಕೂಡ 50 ವರ್ಷ ಒಳಗಿನವರೇ ಹೆಚ್ಚಾಗಿದ್ದಾರೆ.‌‌

ಇವರಲ್ಲಿ ಕೆಲವರು ಮಹಾರಾಷ್ಟ್ರದಿಂದ ಮರಳಿ ಬಂದು, ಒಂದು ವಾರದ ಕ್ವಾರಂಟೈನ್‌ ಅವಧಿ ಮುಗಿಸಿ ಮನೆಗೆ ಮರಳಿದವರು. ಉಳಿದಂತೆ, ನಗರದಲ್ಲಿ ಕಂಡುಬಂದ ವ್ಯಕ್ತಿಗಳಿಗೆ ಯಾರ ಸಂಪರ್ಕದಿಂದ ಸೋಂಕು ಅಂಟಿಕೊಂಡಿದೆ ಎಂಬುದು ಪತ್ತೆಯಾಗಿಲ್ಲ.

ಎಲ್ಲರನ್ನೂ ಇಲ್ಲಿ ಕೋವಿಡ್‌ ಕೇರ್‌ ಸೆಂಟರ್‌ನ ಐಸೋಲೇಷನ್‌ ವಾರ್ಡ್‌ಗಳಿಗೆ ದಾಖಲಿಸಲಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಮಾತ್ರ ಜಿಮ್ಸ್‌ನ ಐಸಿಯು ಘಟಕಕ್ಕೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇವರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ 1,421ಕ್ಕೆ ಏರಿದೆ. 18 ಜನ ನಿಧನ ಹೊಂದಿದ್ದು, 355 ಸಕ್ರಿಯ ರೋಗಿಗಳಿದ್ದಾರೆ.‌

39 ಜನ ಗುಣಮುಖ: ಸೋಮವಾರ ಒಂದೇ ದಿನ ಜಿಲ್ಲೆಯ 39 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇವರೊಂದಿಗೆ ಜಿಲ್ಲೆಯಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 1048ಕ್ಕೆ ಏರಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು