ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಮೂವರ ಸಾವು

Last Updated 23 ಸೆಪ್ಟೆಂಬರ್ 2020, 2:59 IST
ಅಕ್ಷರ ಗಾತ್ರ

ಕಲಬುರ್ಗಿ: ಕೋವಿಡ್‌ ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತೆ ಮೂವರು ನಿಧನರಾಗಿದ್ದು ಮಂಗಳವಾರ ದೃಢಪಟ್ಟಿದೆ. ಇದರೊಂದಿಗೆ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 262ಕ್ಕೆ ಏರಿಕೆಯಾಗಿದೆ.

ತೀವ್ರ ಉಸಿರಾಟದ ತೊಂದರೆಯಿಂದಾಗಿ ಸೇಡಂ ಪಟ್ಟಣದ ಕೆ.ಇ.ಬಿ. ಕಾಲೊನಿಯ 58 ವರ್ಷದ ಮಹಿಳೆ ಆ.27ರಂದು ಆಸ್ಪತ್ರೆಗೆ ದಾಖಲಾಗಿ ಆ.30ರಂದು ನಿಧನ ಹೊಂದಿದರು. ಅದೇ ರೀತಿ ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹದಿಂದ ಬಳಲುತ್ತಿದ್ದ ನಗರದ ಶಿವಾಜಿ ನಗರದ 73 ವರ್ಷದ ವೃದ್ಧ ಸೆ.19ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಸೆ.22ರಂದು ನಿಧನರಾದರು. ವಿಷಮಶೀತ ಜ್ವರ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಚಿಂಚೋಳಿ ತಾಲ್ಲೂಕಿನ ನಿಡಗುಂದಾ ಗ್ರಾಮದ 45 ವರ್ಷದ ಪುರುಷ ಸೆ.17 ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಈ ಮೂವರೂ ಮೃತಪಟ್ಟ ಬಳಿಕ ಅವರಿಗೆ ಕೋವಿಡ್‌ ಅಂಟಿಕೊಂಡಿದ್ದು, ದೃಢಪಟ್ಟಿದೆ.

168 ಮಂದಿಗೆ ಕೋವಿಡ್: ಜಿಲ್ಲೆಯಲ್ಲಿ ಹೊಸದಾಗಿ 168 ಮಂದಿಗೆ ಕೊರೊನಾ ಅಂಟಿಕೊಂಡಿದ್ದು, ಮಂಗಳವಾರ ದೃಢಪಟ್ಟಿದೆ. ಇವರಲ್ಲಿ 99 ಪುರುಷರು ಹಾಗೂ 69 ಮಹಿಳೆಯರು ಸೇರಿದ್ದಾರೆ. ಅದರಲ್ಲೂ 149 ಪ್ರಕರಣಗಳು ವಿಷಮಶೀತ ಜ್ವರದಿಂದ ಬಳಲುತ್ತಿದ್ದವರೇ ಇದ್ದಾರೆ. ನಾಲ್ವರಲ್ಲಿ ಮಾತ್ರ ತೀವ್ರ ಉಸಿರಾಟದ ತೊಂದರೆಯಿಂದ ಕಾಣಿಸಿಕೊಂಡಿದ್ದು, ಅವರನ್ನು ವಿವಿಧ ಕೋವಿಡ್‌ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

ಇನ್ನೊಂದೆಡೆ ಮಂಗಳವಾರ ಒಂದೇ ದಿನ 417 ಮಂದಿ ಸೋಂಕಿನಿಂದ ಮುಕ್ತರಾಗಿದ್ದು, ಮನೆಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT