ಗುರುವಾರ , ನವೆಂಬರ್ 14, 2019
19 °C

ಅಪಘಾತ: ಕೆಎಸ್‌ಆರ್‌ಪಿ ಹೆಡ್‌ ಕಾನ್‌ಸ್ಟೆಬಲ್‌ ಸಾವು

Published:
Updated:

ಕಲಬುರ್ಗಿ: ನಗರದ ಹೊರವಲಯದ ಜಮಗಾ ಕ್ರಾಸ್‌ ಬಳಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜಿಲ್ಲೆಯ ಕೆಎಸ್‌ಆರ್‌ಪಿ ಹೆಡ್‌ ಕಾನ್‌ಸ್ಟೆಬಲ್‌, ಬೆಳಮಗಿ ಗ್ರಾಮದ ಸುಬ್ಬಣ್ಣ ಸಂಗಣ್ಣ (48) ಬುಧವಾರ ಮೃತಪಟ್ಟರು. 

ಬೆಳಮಗಿ ಗ್ರಾಮದಿಂದ ಕರ್ತವ್ಯಕ್ಕೆ ಹಾಜರಾಗಲು ನಗರಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ಸುಬ್ಬಣ್ಣ ಅವರಿಗೆ ಎದುರಿನಿಂದ ಬಂದ ಬೈಕ್‌ ಸವಾರ ಡಿಕ್ಕಿ ಹೊಡೆಸಿದ. ಬೈಕ್‌ ಸವಾರನಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)