ಚಿನ್ನಾಭರಣ, ನಗದು ಕಳವು

7

ಚಿನ್ನಾಭರಣ, ನಗದು ಕಳವು

Published:
Updated:

ಕಲಬುರ್ಗಿ: ಕೈಲಾಸ ನಗರದಲ್ಲಿರುವ ಮನೆಯೊಂದರಲ್ಲಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿದ್ದು, ಸೋಮವಾರ ದೂರು ದಾಖಲಾಗಿದೆ.

ಸಂಜೀವಕುಮಾರ್ ತ್ರೀಲಾಪುರ ಅವರಿಗೆ ಈ ಮನೆ ಸೇರಿದೆ. ಇವರು ಕೆಲಸದ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಆಗ ಮನೆಗೆ ನುಗ್ಗಿದ ಕಳ್ಳರು ₹1.68 ಲಕ್ಷ ಮೌಲ್ಯದ ಚಿನ್ನಾಭರರಣ ಮತ್ತು ನಗದು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿ ನಾಪತ್ತೆ; ಅಪಹರಣ ಶಂಕೆ
ಕಲಬುರ್ಗಿ:
ಜೆ.ಆರ್.ನಗರದಲ್ಲಿ ವಿದ್ಯಾರ್ಥಿಯೊಬ್ಬ ಈಚೆಗೆ ನಾಪತ್ತೆಯಾಗಿದ್ದು, ಪಾಲಕರು ಅಪಹರಣ ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ಸಿದ್ರಾಮ ಹಣಮಂತರಾಯ ಗೌಡಪ್ಪಗೋಳ (16) ನಾಪತ್ತೆಯಾದವ. ಕಿರು ಟಿಪ್ಪಣಿ ಜೆರಾಕ್ಸ್ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಹೋದವನು ವಾಪಸು ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, 5 ಅಡಿ 6 ಇಂದು ಎತ್ತರ, ಕೆಂಪು ಟೀ–ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ರಾಘವೇಂದ್ರ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !