ಮಂಗಳವಾರ, ಜೂನ್ 22, 2021
22 °C

ಯುವಕನ ಕೊಲೆ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದಲ್ಲಿ ಈಚೆಗೆ ಮಿಲ್ಲತ್‌ ನಗರದ ಜಿಶಾನ್‌ ಉಸ್ಮಾನ್‌ (25) ಎಂಬ ಯುವಕನಿಗೆ ಚಾಕು ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಯದುಲ್ಲಾ ಕಾಲೊನಿಯ ಕಮಾಲೆ ಮುಜರತ್‌ ದರ್ಗಾ ಹತ್ತಿರದ ನಿವಾಸಿಗಳಾದ ನದೀಮ್‌ಪಾಸಾ ಮನ್ನಾಶೇಖ್‌ (26), ನಯೀಮ್‌ ಮನ್ನಾಶೇಖ್‌ (25) ಹಾಗೂ ರಹೀಮ್‌ ಮನ್ನಾಶೇಖರ್‌ (22) ಬಂಧಿತರು.

ಈ ಮೂವರೂ ಸೇರಿಕೊಂಡು ಮಾರ್ಚ್‌ 20ರ ರಾತ್ರಿ 9ರ ಸುಮಾರಿಗೆ ಜಿಶಾನ್‌ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದರು. ತಲೆ, ಕುತ್ತಿಗೆಗೆ ಹೊಡೆದು ನಂತರ ಬೆನ್ನಿನಲ್ಲಿ ಡ್ರ್ಯಾಗರ್‌ ತೂರಿಸಿದ್ದರು. ಜಿಶಾನ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಕೊಲೆ ವೈಯಕ್ತಿಕ ಕಾರಣಗಳಿಂದಾಗಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೋಜಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು