ಶುಕ್ರವಾರ, ನವೆಂಬರ್ 15, 2019
20 °C

ಕಲಬುರ್ಗಿ: ವಾಹನಕ್ಕೆ ಡಿಕ್ಕಿ ಹೊಡೆಸಿ ವ್ಯಕ್ತಿ ಕೊಲೆ

Published:
Updated:

ಕಲಬುರ್ಗಿ: ಚಲಿಸುತ್ತಿದ್ದ ಟೆರೆನೊ ನಿಶಾನ್ ವಾಹನಕ್ಕೆ ಸ್ಕಾರ್ಪಿಯೊ ವಾಹನ ಡಿಕ್ಕಿ ಹೊಡೆಸಿ ಜೇವರ್ಗಿ ತಾಲ್ಲೂಕಿನ ಮಯೂರ ಗ್ರಾಮದ ಶಿವಲಿಂಗ ‌ಎಂಬುವವರನ್ನು ಕೊಲೆ ಮಾಡಲಾಗಿದೆ.

ಕಲಬುರ್ಗಿ ಹೊರವಲಯದ ಶರಣಸಿರಸಗಿ ಗ್ರಾಮದ ಬಳಿಯ ರಸ್ತೆಯಲ್ಲಿ ಈ ಕೊಲೆ ನಡೆದಿದ್ದು, ಹಳೆಯ ವೈಷಮ್ಯವೇ ಕಾರಣ ಎನ್ನಲಾಗಿದೆ.

ಮೊದಲು ವಾಹನವನ್ನು ಬೆನ್ನಟ್ಟಿಕೊಂಡು ಹೋದ ದುಷ್ಕರ್ಮಿಗಳು ನಂತರ ಅದಕ್ಕೆ ಡಿಕ್ಕಿ ಹೊಡೆಸಿದ್ದಾರೆ. ವಾಹನದಿಂದ ಶಿವಲಿಂಗ ಅವರನ್ನು ‌ಎಳೆದು ಕೊಲೆ ಮಾಡಿದ್ದಾರೆ‌.

ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)