ಭಾನುವಾರ, ಜೂನ್ 26, 2022
21 °C

ಕಲಬುರ್ಗಿ: ₹75 ಸಾವಿರ ಮೌಲ್ಯದ ಮದ್ಯ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರ ಹಾಗೂ ಜಿಲ್ಲೆಯ ವಿವಿಧೆಡೆ ಗುರುವಾರ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ಹಾಗೂ ಅದಕ್ಕೆ ಬಳಸಿದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.‌ ಇದರ ಒಟ್ಟು ಮೌಲ್ಯ ₹ 75 ಸಾವಿರ ಎಂದು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹಮ್ಮದ್ ಇಸ್ಮಾಯಿಲ್ ಇನಾಮದಾರ್‌ ತಿಳಿಸಿದ್ದಾರೆ.

ಸೇಡಂ ತಾಲ್ಲೂಕಿನ ಬೊಂದೆಪಲ್ಲಿ ಸಮೀಪದ ಇಂದಿರಾ ನಗರ ತಾಂಡಾ, ಮಳಖೇಡ ಸ್ಟೇಷನ್ ತಾಂಡಾದ ಕಿಶನ್‌ ನಗರ, ಕಲಬುರ್ಗಿ ನಗರದ ಗಂಜ್‌ ಪ್ರದೇಶದಲ್ಲಿ ದಾಳಿ ನಡೆದಿದೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕ ವಿಜಯಕುಮಾರ, ಪಿಎಸ್‌ಐ ಗೋಪಾಳೆ ಪಂಡಿತ, ಧನರಾಜ್, ಸೇಡಂ ವಲಯದ ರವಿಕುಮಾರ, ಕಲಬುರ್ಗಿ ವಲಯ ನಂ.1ರ ಬಾಲಕೃಷ್ಣ ಮುದಕಣ್ಣ, ಅಬಕಾರಿ ಕಾನ್‌ಸ್ಟೆಬಲ್ ವೆಂಕಟೇಶ ಹಾಗೂ ವಾಹನ ಚಾಲಕ ಆನಂದ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು