ಬುಧವಾರ, ಅಕ್ಟೋಬರ್ 21, 2020
24 °C

ಬೆಳೆ ಸಮೀಕ್ಷೆ: ಜಿಲ್ಲೆಗೆ ಚಿಂಚೋಳಿ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಬೆಳೆ ಸಮೀಕ್ಷೆಯಲ್ಲಿ ಶೇ 59 ಸಾಧನೆ ಮಾಡಲಾಗಿದೆ. ಇಲ್ಲಿಯವರೆಗಿನ ಅಂಕಿಅಂಶಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿಯೇ ಚಿಂಚೋಳಿ ತಾಲ್ಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದರು.

ಇಲ್ಲಿನ ಚಂದಾಪುರದ ಸಿ.ಬಿ.ಪಾಟೀಲ ಡಿಗ್ರಿ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆದ ಬೆಳೆ ಸಮೀಕ್ಷೆಗಾರರ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಬೆಳೆ ಸಮೀಕ್ಷೆಗೆ ಸೆ.24 ಕೊನೆಯ ದಿನವಾಗಿದೆ. ರೈತರ ತಂತ್ರಾಂಶಕ್ಕೆ ಬದಲಾಗಿ ಶುಕ್ರವಾರದಿಂದ ಹೊಸ ತಂತ್ರಾಂಶ ಹಲವಾರು ಮಾರ್ಪಾಡುಗಳನ್ನು ಒಳಗೊಂಡಿದೆ. ಇನ್ನು ಮುಂದೆ ಬೆಳೆ ಸಮೀಕ್ಷೆಗಾರರು ಹೊಸ ತಂತ್ರಾಂಶ ಬಳಸಿ ಬೆಳೆ ಸಮೀಕ್ಷೆ ನಡೆಸಬೇಕೆಂದು ತಿಳಿಸಿದರು.

ಅಪರೂಪದ ಬೆಳೆ ಬೆಳೆದಿದ್ದರೆ, ಹಲವು ದಶಕಗಳಿಂದ ಹಕ್ಕು ವರ್ಗಾವಣೆಯಾಗದೆ ಮೃತರ ಹೆಸರಲ್ಲಿ ಜಮೀನಿದ್ದರೆ ಹೇಗೆ ಎಂಬ ಬೆಳೆ ಸಮೀಕ್ಷೆಗಾರರ ಪ್ರಶ್ನೆಗೆ ಉತ್ತರಿಸಿದ ಉಪ ನಿರ್ದೇಶಕ ಸಮದ್ ಪಟೇಲ್ ಸಮರ್ಪಕ ಮಾಹಿತಿ
ನೀಡಿದರು.

ಬೆಳೆ ಸಮೀಕ್ಷೆಗಾರರಿಗೆ ಸಂಪನ್ಮೂಲ ವ್ಯಕ್ತಿಯಾಗಿರುವ ಸುಲೇಪೇಟ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಇಮ್ರಾನ್ ಅಲಿ ಲದಾಫ್ ತರಬೇತಿ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅನಿಲಕುಮಾರ ರಾಠೋಡ್, ಕೃಷಿ ಅಧಿಕಾರಿಗಳಾದ ಪ್ರಕಾಶ ರಾಠೋಡ್, ಅಭಿಲಾಶ ಸುಬೇದಾರ, ಇಮ್ರಾನ್ ಅಲಿ ಸುಲೇಪೇಟ, ಕಂದಾಯ ನಿರೀಕ್ಷಕರಾದ ಕೇಶವ ಕುಲಕರ್ಣಿ, ಸುಭಾಶ ನಿಡಗುಂದಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು