ಮೇ 25, 26ರಂದು ಸಿಯುಕೆ ಪ್ರವೇಶ ಪರೀಕ್ಷೆ

ಶನಿವಾರ, ಏಪ್ರಿಲ್ 20, 2019
26 °C

ಮೇ 25, 26ರಂದು ಸಿಯುಕೆ ಪ್ರವೇಶ ಪರೀಕ್ಷೆ

Published:
Updated:
Prajavani

ಕಲಬುರ್ಗಿ: ಆಳಂದ ತಾಲ್ಲೂಕು ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಮೇ 25 ಮತ್ತು 26 ರಂದು ದೇಶದ 120 ಕೇಂದ್ರಗಳಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಸಿಇಟಿ) ನಡೆಯಲಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ, ‘ಮಾರ್ಚ್ 13ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಏ.13 ಕೊನೆಯ ದಿನವಾಗಿತ್ತು. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅರ್ಜಿ ಸಲ್ಲಿಕೆ ಅವಧಿಯನ್ನು ಏ.20ರ ವರೆಗೆ ವಿಸ್ತರಿಸಲಾಗಿದೆ. 25 ಕೋರ್ಸ್‌ಗಳ 700 ಸೀಟುಗಳಿಗೆ ಇದುವರೆಗೆ 31,950 ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದರು.

‘ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಜೀವ ವಿಜ್ಞಾನ, ಪ್ರವಾಸೋದ್ಯಮ ಮತ್ತು ಪ್ರಯಾಣ ವ್ಯವಸ್ಥಾಪನ (ಟೂರಿಸಂ ಮತ್ತು ಟ್ರಾವೆಲ್ ಮ್ಯಾನೇಜ್‌ಮೆಂಟ್), ವಿದೇಶಿ ಭಾಷೆಗಳ ಅಧ್ಯಯನ, ಕಾನೂನು ಮತ್ತು ಸಾರ್ವಜನಿಕ ಆಡಳಿತ ಒಳಗೊಂಡಂತೆ 6 ಹೊಸ ಕೋರ್ಸ್‌ಗಳಿಗೆ ಈ ವರ್ಷದಿಂದ ಅನುಮತಿ ದೊರೆತಿದೆ. ಈ ಪೈಕಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಜೀವ ವಿಜ್ಞಾನ, ಪ್ರವಾಸೋದ್ಯಮ ಮತ್ತು ಪ್ರಯಾಣ ವ್ಯವಸ್ಥಾಪನ ಕೋರ್ಸ್‌ಗಳನ್ನು ಮಾತ್ರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಜಾನಪದ ಅಧ್ಯಯನ, ಸಂಗೀತ ಮತ್ತ ಬುಡಕಟ್ಟು ಜನರ ಅಧ್ಯಯನ ಕೋರ್ಸ್‌ಗಳಿಗೆ ಈ ವರ್ಷ 150 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಬಿ.ಎಸ್ಸಿ ಮತ್ತು ಎಂ.ಎಸ್ಸಿ ಕೋರ್ಸ್‌ಗೆ ಅತೀ ಹೆಚ್ಚು ಅಂದರೆ 7,062 ಅರ್ಜಿಗಳು ಬಂದಿವೆ. ಜೂನ್ 21ರಂದು ಫಲಿತಾಂಶ ಪ್ರಕಟಿಸಲಾಗುವುದು’ ಎಂದು ಹೇಳಿದರು.

ಸಮ ಕುಲಪತಿ ಪ್ರೊ.ಜಿ.ಆರ್.ನಾಯ್ಕ್, ಕುಲಸಚಿವ ಪ್ರೊ.ಮುಷ್ತಾಕ್ ಅಹ್ಮದ್ ಐ.ಪಟೇಲ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !