ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಸರಿಯಾಗಿ ಬೈಕ್ ದುರಸ್ತಿ ಮಾಡದ್ದಕ್ಕೆ ಕೋ‍ಪ: ಓಲಾ ಶೋರೂಂಗೆ ಬೆಂಕಿ!

Published : 11 ಸೆಪ್ಟೆಂಬರ್ 2024, 5:02 IST
Last Updated : 11 ಸೆಪ್ಟೆಂಬರ್ 2024, 5:02 IST
ಫಾಲೋ ಮಾಡಿ
Comments

ಕಲಬುರಗಿ: ತನ್ನ ಬೈಕ್‌ ಸರಿಯಾಗಿ ದುರಸ್ತಿ ಮಾಡಿಲ್ಲ ಎಂಬ ಕೋಪದಲ್ಲಿ ವ್ಯಕ್ತಿಯೊಬ್ಬರು ಹುಮನಾಬಾದ್ ಮುಖ್ಯರಸ್ತೆಯಲ್ಲಿನ ಓಲಾ ಎಲೆಕ್ಟ್ರಿಕ್‌ ವಾಹನದ ಶೋರೂಂಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.

ನಗರದ ನಿವಾಸಿ ಮಹಮದ್ ನದೀಮ್ ಬೆಂಕಿ ಹಚ್ಚಿದ ಆರೋಪಿ ಎಂದು ತಿಳಿದುಬಂದಿದೆ.

ಮಂಗಳವಾರ ಬೆಳಿಗ್ಗೆ 10ರ ಸುಮಾರಿಗೆ ಶೋರೂಂಗೆ ಬಂದ ನದೀಮ್, ತನ್ನ ಎಲೆಕ್ಟ್ರಿಕ್ ಬೈಕ್ ದುರಸ್ತಿಯ ಬಗ್ಗೆ ಶೋರೂಂ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದರು. ಸರಿಯಾದ ಸ್ಪಂದನೆ ಸಿಗದಿರುವುದಕ್ಕೆ ಕೋಪದಲ್ಲಿ ಶೋರೂಂಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಬೈಕ್‌ಗಳು, ಸಾಮಗ್ರಿಗಳು ಸುಟ್ಟಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದರು.

ಆರೋಪಿ ವಶಕ್ಕೆ: ಶೋರೂಂಗೆ ಬೆಂಕಿ ಹಚ್ಚಿದ ಆರೋಪದಡಿ ಮಹಮದ್ ನದೀಮ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT