ಶುಕ್ರವಾರ, ಏಪ್ರಿಲ್ 23, 2021
24 °C

ಕಲಬುರ್ಗಿಗೂ ಭೇಟಿ ನೀಡಿದ್ದಬ್ರಹ್ಮಕುಮಾರಿ ದಾದಿ ಗುಲ್ಜಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಹಿಳಾ ಸಂಚಾಲಿತ ಸಂಸ್ಥೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿದ್ದ ದಾದಿ ಗುಲ್ಜಾರ್ (95) ಗುರುವಾರ ನಿಧನರಾದರು.

‘ದಾದಿ ಗುಲ್ಜಾರ್ ಅವರು 80ಕ್ಕೂ ಹೆಚ್ಚು ವರ್ಷಗಳಿಂದ ಭಾರತ ಹಾಗೂ ವಿಶ್ವದೆಲ್ಲೆಡೆ ಆಧ್ಯಾತ್ಮಿಕ ಸೇವೆಯಲ್ಲಿ ಅವಿರತ ಶ್ರಮಿಸಿದ್ದರು.

2005ರಲ್ಲಿ ಕಲಬುರ್ಗಿ ನಗರಕ್ಕೂ ಭೇಟಿ ನೀಡಿದ ಸಂದರ್ಭದಲ್ಲಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಅವರನ್ನು ಕಾಣಲು ಸುಮಾರು 50 ಸಾವಿರ ಜನ ಬಂದಿದ್ದರು’ ಎಂದು ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ರಾಜಯೋಗಿ ಪ್ರೇಮಣ್ಣ ತಿಳಿಸಿದ್ದಾರೆ.

ಮಾರ್ಚ್ 13ರಂದು ಮೌಂಟ್ ಅಬುವಿನ ಜ್ಞಾನಸರೋವರ ಪರಿಸರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.