ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡಗುಂಡ ದೇವಸ್ಥಾನ ಜೀರ್ಣೋದ್ಧಾರ ಶುರು

ದೇಣಿಗೆ ಹಣ ಟ್ರಸ್ಟಿಗೆ ನೀಡಿ, ಮಧ್ಯವರ್ತಿಗಳಿಗೆ ಬೇಡ: ಭಾಗಣ್ಣಗೌಡ
Last Updated 12 ಅಕ್ಟೋಬರ್ 2022, 10:56 IST
ಅಕ್ಷರ ಗಾತ್ರ

ಚಿತ್ತಾಪುರ: ‘ತಾಲ್ಲೂಕಿನ ದಂಡ ಗುಂಡ ಗ್ರಾಮದ ಸುಕ್ಷೇತ್ರ ಬಸವಣ್ಣ ದೇವಸ್ಥಾನ ಜೀ ರ್ಣೋ ದ್ಧಾರಕ್ಕಾಗಿ ಭಕ್ತರು ದೇಣಿಗೆ ಹಣವನ್ನು ದೇವ ಸ್ಥಾನದ ಅಧಿಕೃತ ಟ್ರಸ್ಟಿಗೆ ನೀಡಬೇಕು. ಮಧ್ಯವರ್ತಿಗಳಿಗೆ ನೀಡಬಾರದು’ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರು ಹೇಳಿದರು.

‘ದೇವಸ್ಥಾನ ಜೀರ್ಣೋದ್ಧಾರ ಸಂಬಂಧ ಕೆಲವರು ದೇಣಿಗೆ ಸಂಗ್ರಹಿಸುತ್ತಿರುವ ಮಾಹಿತಿ ಬಂದಿದೆ. ಭಕ್ತರು ಟ್ರಸ್ಟ್ ಹೊರತುಪಡಿಸಿ ಬೇರೆ ಯಾರಿಗೂ ತಮ್ಮ ಭಕ್ತಿಯ ದೇಣಿಗೆ ನೀಡಬಾರದು’ ಎಂದುಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

‘ದೇವಸ್ಥಾನದ ಹಳೇ ಕಟ್ಟಡ ತೆರವುಗೊಳಿಸಿ ₹4.54 ಕೋಟಿ ವೆಚ್ಚದಲ್ಲಿ ನೂತನ ದೇಗುಲ ನಿರ್ಮಾಣದ ಕುರಿತು ಯೋಜನೆ ಸಿದ್ಧಪಡಿಸಲಾಗಿದೆ. ತಮಿಳುನಾಡಿನ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿ, ₹50 ಲಕ್ಷ ಮುಂಗಡ ಪಾವತಿಸಲಾಗಿದೆ. ಹಳೇ ಕಟ್ಟಡ ತೆರವು ಕಾರ್ಯ ಭರದಿಂದ ಸಾಗಿದೆ’ ಎಂದು ತಿಳಿಸಿದರು.

‘ಪ್ರಸ್ತುತ ದೇವಸ್ಥಾನದ ಟ್ರಸ್ಟಿನಲ್ಲಿ ₹1 ಕೋಟಿ ಜಮಾ ಇದೆ. ಇನ್ನೂ ಬೇಕಾದ ₹3 ಕೋಟಿ ಭಕ್ತರು, ಉದ್ಯಮಿಗಳಿಂದ ದೇಣಿಗೆ ಸಂಗ್ರಹಕ್ಕೆ ಟ್ರಸ್ಟ್ ಪದಾಧಿಕಾರಿ ಸಮಿತಿ ರಚನೆ ಮಾಡಲಾಗುವುದು. ಪ್ರತಿ ಗ್ರಾಮಗಳಿಗೆ ಹೋಗಿ ದೇಣಿಗೆ ಪಡೆಯಲಾಗುವುದು. ಇದಕ್ಕೆ ಭಕ್ತರು ರಸೀದಿ ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ಟ್ರಸ್ಟ್ ವತಿಯಿಂದ ಇನ್ನೂ ದೇಣಿಗೆ ಸಂಗ್ರಹ ಆರಂಭಿಸಿಲ್ಲ. ಆದರೆ, ಕೆಲವು ಜನ ದೇವಸ್ಥಾನದ ಜೀರ್ಣೋದ್ದಾರ ಹೆಸರಿನಲ್ಲಿ ದೇಗುಲದ ಚಿತ್ರ ತೋರಿಸಿ ಹಣ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಹಾಗೆ ಯಾರಾದರೂ ದೇಣಿಗೆ ಕೇಳಿದರೆ ಭಕ್ತರು ಟ್ರಸ್ಟ್ ಗಮನಕ್ಕೆ ತರಬೇಕು’ ಎಂದು ಕೋರಿದರು.

‘ದೇವಸ್ಥಾನ ಟ್ರಸ್ಟ್ ಹೆಸರಿನಲ್ಲಿ ಚಿತ್ತಾಪುರ ಪಟ್ಟಣದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ (ಕೆಜಿಬಿ) ಶಾಖೆಯಲ್ಲಿನ ಖಾತೆ ಸಂಖ್ಯೆ 11029100007792 ಹಾಗೂ ಅಳ್ಳೊಳ್ಳಿ ಗ್ರಾಮದಲ್ಲಿನ ಬ್ಯಾಂಕ್ ಖಾತೆ ಸಂಖ್ಯೆ 11052100004724 ಗೆ ಭಕ್ತರು ದೇಣಿಗೆ ಹಣ ಜಮಾ ಮಾಡಬಹುದು’ ಎಂದು ತಿಳಿಸಿದರು. ‘ದೇವಸ್ಥಾನ ಜೀರ್ಣೋದ್ದಾರ ದೇಣಿಗೆ ಕುರಿತು ಭಕ್ತರು ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌ ಡ ಸಂಕನೂರು ಮೊ:9448145169, ಉಪಾಧ್ಯಕ್ಷ ಬಿ.ಜಿ. ಪಾಟೀಲ್ ಮೊ:944 8471549, ಕಾರ್ಯ ದರ್ಶಿ ಚಂದ್ರಶೇಖರ ಅವಂಟಿ ಮೊ:9880691111, ದೇವಸ್ಥಾನ ಕಾರ್ಯದರ್ಶಿ ಮೊ:9686630010 ಅವರನ್ನು ಸಂಪರ್ಕಿಸಬಹುದು’ ಎಂದರು.

ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಅವಂಟಿ, ಸದಸ್ಯರಾದ ಭೀಮಣ್ಣ ಸಾಲಿ, ಡಾ. ಪ್ರಭುರಾಜ ಕಾಂತಾ, ರಾಜಶೇಖರ ಪಾಟೀಲ ಸಂಕನೂರು ಹಾಗೂ ಮಹಾಂತಗೌಡ ಪೋಲಿಸ್‌ ಪಾಟೀಲ ದಂಡಗುಂಡ ಅವರು ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT