ಸೋಮವಾರ, 9 ಫೆಬ್ರುವರಿ 2026
×
ADVERTISEMENT
ADVERTISEMENT

ರಾಷ್ಟ್ರೀಯ ಪಕ್ಷಗಳು ಮಾಡದ ಕೆಲಸ ದಸಂಸ ಮಾಡಿದೆ: ಡಿ.ಜಿ.ಸಾಗರ

Published : 30 ನವೆಂಬರ್ 2024, 15:49 IST
Last Updated : 30 ನವೆಂಬರ್ 2024, 15:49 IST
ಫಾಲೋ ಮಾಡಿ
Comments
ನಾವು ಒಳಮೀಸಲಾತಿ ವಿರೋಧಿಗಳಲ್ಲ. ಒಳಮೀಸಲಾತಿ ವೈಜ್ಞಾನಿಕವಾಗಿ ಹಂಚಿಕೆ ಆಗಬೇಕು ಹಾಗೂ ಎಲ್ಲರಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕು
ಡಿ.ಜಿ.ಸಾಗರ ರಾಜ್ಯ ಘಟಕದ ಸಂಚಾಲಕ ದಲಿತ ಸಂಘರ್ಷ ಸಮಿತಿ
ಪ್ರೊ.ಮಲ್ಲೇಶಿ ಸಜ್ಜನ್ ಗುಣಗಾನ
ಹೋರಾಟಗಾರ ಮಲ್ಲೇಶಿ ಸಜ್ಜನ್ ಅವರ ಶ್ರಮದಿಂದ ನೂರಾರು ಕಾರ್ಮಿಕ ಕುಟುಂಬಗಳು ಜೀವನ ಕಟ್ಟಿಕೊಂಡವು. ಸಂಭಾವಿತರಾಗಿದ್ದ ಅವರು ಎಲ್ಲರಲ್ಲೂ ವಿಶ್ವಾಸ ಇಡುವ ಸ್ವಭಾವ ಹಾಗೂ ಮುಗ್ದ ಮನಸ್ಸಿನ ವ್ಯಕ್ತಿಯಾಗಿದ್ದರು. ಅವರು ದಲಿತ ಚಳವಳಿ ಹಾಗೂ ಕಾರ್ಮಿಕರ ಚಳವಳಿಗಾಗಿಯೇ ಜೀವ ತೇಯ್ದರು’ ಎಂದು ಡಿ.ಜಿ.ಸಾಗರ ಬಣ್ಣಿಸಿದರು. ‘ಸಜ್ಜನ್‌ ಅವರಿಗೆ ರಾಜಕಾರಣಿಯಾಗಬೇಕೆಂಬ ಆಸೆ ಕೈಗೂಡಲಿಲ್ಲ. ರಾಜಕಾರಣಿಯೊಬ್ಬರ ಕಡೆಯಿಂದ ಬಂದ ಜೀವ ಬೆದರಿಕೆಯಿಂದ ವಿಧಾನಸಭೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು’ ಎಂದು ಸ್ಮರಿಸಿದರು. ‘ಕಾರ್ಮಿಕ ಕಾನೂನು ತಿಳಿಯುವ ಸಲುವಾಗಿಯೇ ಕಾನೂನು ಪದವಿ ಪಡೆದ ಮಲ್ಲೇಶಿ ಸಜ್ಜನ್‌ ದೂರದ ಕೋಲ್ಕತ್ತಾದ ಡಿಆರ್‌ಟಿ ಕೋರ್ಟ್‌ನಲ್ಲಿ ಎಸಿಸಿ ಕಾರ್ಮಿಕರ ಪರ ಹೋರಾಡಿದರು. ಸದ್ಯ ಇಂತಹವರ ಸಂಖ್ಯೆ ಕಡಿಮೆ ಆಗಿದೆ’ ಎಂದು ಎಸ್‌.ಕೆ.ಕಾಂತಾ ಹೇಳಿದರು. ‘ವಿಚಾರವಂತ ಹಾಗೂ ಬುದ್ದಿವಂತರೂ ಆಗಿದ್ದ ಮಲ್ಲೇಶಿ ಸಜ್ಜನ್‌ ಎಸಿಸಿ ಸಿಮೆಂಟ್ ಕಂಪನಿ ವಿರುದ್ಧ ಹೋರಾಡಿ ನೂರಾರು ಕಾರ್ಮಿಕರಿಗೆ ನೌಕರಿ ಉಳಿಸಿಕೊಡುವುದರ ಜತೆಗೆ ಅವರಿಗೆ ಬರಬೇಕಿದ್ದ ಹಿಂಬಾಕಿ ವೇತನವನ್ನು ಕೊಡಿಸುವುದರ ಮೂಲಕ 2000 ಕುಟುಂಬಗಳಿಗೆ ಜೀವನ ಭದ್ರತೆಯನ್ನು ಒದಗಿಸಿಕೊಟ್ಟರು’ ಎಂದು ದಸಂಸ ಸಂಚಾಲಕ ಸುರೇಶ್‌ ಮೆಂಗನ್‌ ಗದ್ಗದಿತರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT