‘ವ್ಯಸನಮುಕ್ತ ದಿನ’: ಪ್ರತಿಜ್ಞಾವಿಧಿ ಸ್ವೀಕಾರ

7

‘ವ್ಯಸನಮುಕ್ತ ದಿನ’: ಪ್ರತಿಜ್ಞಾವಿಧಿ ಸ್ವೀಕಾರ

Published:
Updated:
Deccan Herald

ಕಲಬುರ್ಗಿ: ಚಿತ್ತರಗಿ–ಇಳಕಲ್‌ನ ಲಿಂ.ಮಹಾಂತಪ್ಪ ಸ್ವಾಮೀಜಿ ಅವರ ಜನ್ಮದಿನವನ್ನು ವ್ಯಸನಮುಕ್ತ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಆದರೆ, ಈ ಆಚರಣೆ ಕಡ್ಡಾಯವಾಗಬೇಕು ಎಂದು ಇಲ್ಲಿಯ ವಿದ್ಯಾನಗರ ವೆಲ್ಫೇರ್‌ ಸೊಸೈಟಿಯವರು ಆಗ್ರಹಿಸಿದ್ದಾರೆ.

ಆಗಸ್ಟ್‌ 1 ಶ್ರೀಗಳ ಜನ್ಮದಿನ. ಅಂದು ಸರ್ಕಾರಿ ಕಚೇರಿ, ಶಾಲಾ–ಕಾಲೇಜುಗಳಲ್ಲಿ ಕಡ್ಡಾಯವಾಗಿ ವ್ಯಸನಮುಕ್ತ ದಿನ ಆಚರಿಸಬೇಕು ಎಂದು ಅವರು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.

ಸಂಘಟನೆಯಿಂದ ನಗರದಲ್ಲಿ ವ್ಯಸನಮುಕ್ತ ದಿನ ಆಚರಿಸಿ, ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಸಂಘಟನೆಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಉಪಾಧ್ಯಕ್ಷ ಉಮೇಶ ಶೆಟ್ಟಿ, ಕಾರ್ಯದರ್ಶಿ ಶಿವರಾಜ ಅಂಡಗಿ,ಕಾಶಿನಾಥ ಚಿನ್ಮಳ್ಳಿ, ಮಲ್ಲಿಕಾರ್ಜುನ ನಾಗಶೆಟ್ಟಿ, ಸುಭಾಷ ಮಂಠಾಳೆ, ಮಹಾದೇವಪ್ಪ ಪಾಟೀಲ, ಶಿವಪುತ್ರಪ್ಪ ದಂಡೋತಿ, ಈರಣ್ಣ, ಶಾಂತಯ್ಯ ಬೀದಿ, ನಾಗಭೂಷಣ ಹಿಂದೊಡ್ಡಿ, ರವಿ ತಂಬಾಕೆ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !