ಬುಧವಾರ, ಸೆಪ್ಟೆಂಬರ್ 18, 2019
28 °C

ಹಿರಿಯ ರಂಗಕರ್ಮಿ ಈಶ್ವರಪ್ಪ ಫರಹತಾಬಾದ್‌

Published:
Updated:
Prajavani

ಕಲಬುರ್ಗಿ: ಇತ್ತೀಚೆಗಷ್ಟೇ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ಹಿರಿಯ ರಂಗಕರ್ಮಿ ಈಶ್ವರಪ್ಪ ಫರಹತಾಬಾದ್‌ (82) ಅವರು ಭಾನುವಾರ ನಗರದಲ್ಲಿ ನಿಧನರಾದರು.

ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. 

1952ರಲ್ಲಿ ರಂಗಭೂಮಿ ಪ್ರವೇಶಿಸಿದ್ದ ಈಶ್ವರಪ್ಪ ಅವರು 44 ನಾಟಕಗಳು, 50ಕ್ಕೂ ಅಧಿಕ ರೇಡಿಯೊ ನಾಟಕಗಳಲ್ಲಿ ಭಾಗವಹಿಸಿದ್ದರು. ದೂರದರ್ಶನದ 9 ನಾಟಕಗಳಲ್ಲಿ ಅಭಿನಯಿಸಿದ್ದರು. ಮಹಾದಾಸೋಹಿ ಶರಣಬಸವ, ಏಳು ಕೋಟಿ ಮಾರ್ತಾಂಡ ಭೈರವ ಹಾಗೂ ಮಾರ್ಕೆಟ್‌ ರೌಡಿ ಸಿನಿಮಾಗಳಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಉದ್ಯೋಗಿಯಾಗಿ ನಿವೃತ್ತಿಯಾಗಿದ್ದರು.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಈಶ್ವರಪ್ಪ ಅವರಿಗೆ ನಾಟಕ ಅಕಾಡೆಮಿಯು ಪ್ರಶಸ್ತಿ ಘೋಷಣೆ ಮಾಡಿತ್ತು. ಆದರೆ, ಪ್ರಶಸ್ತಿ ಸ್ವೀಕರಿಸುವ ಮೊದಲೇ ಅವರು ಇಹಲೋಕ ತ್ಯಜಿಸಿದರು.

ಅಂತ್ಯಕ್ರಿಯೆ ಇದೇ 26ರಂದು ಮಧ್ಯಾಹ್ನ 1ಕ್ಕೆ ಅಫಜಲಪುರ ರಸ್ತೆಯ ರೈಲ್ವೆ ಗೇಟ್ ಸಮೀಪದ ಸಿದ್ಧಾರ್ಥ ನಗರ ರುದ್ರಭೂಮಿಯಲ್ಲಿ ನೆರವೇರಲಿದೆ.

Post Comments (+)