ಆಳಂದ: ತಾಲ್ಲೂಕಿನ ದೇಗಾಂವ ಗ್ರಾಮದಲ್ಲಿ ಶನಿವಾರ ಶೇಖ್ ಜಿಂದಾವಲಿ ದರ್ಗಾ ಮತ್ತು ಜೈ ಬಜರಂಗಬಲಿ ದೇವರ ಜಾತ್ರೆಯಲ್ಲಿ ಮದ್ದಿನ ಹುಲಿಯ ಓಟವು ರೋಮಾಂಚನಕಾರಿಯಾಗಿ ಜರುಗಿತು. ಸುತ್ತಲಿನ ಗ್ರಾಮದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.

ಹಿಂದೂ–ಮುಸ್ಲಿಂ ಧರ್ಮೀಯರು ಒಗ್ಗೂಡಿ ಹುಲಿ ಓಟ ಆಚರಿಸುವುದು ವಿಶಿಷ್ಟ. ಬೆರಳಣಿಕೆಯಷ್ಟು ಸಂಖ್ಯೆಯಲ್ಲಿರುವ ಮುಸ್ಲಿಂ ಕುಟುಂಬದ ಜೊತೆಗೆ ಗ್ರಾಮದ ಭಕ್ತರು ಸಾಮರಸ್ಯದಿಂದ ಜಿಂದಾವಲಿ ದರ್ಗಾ ಮತ್ತು ಭಜರಂಗ ಬಲಿ ದೇವರ ಜಾತ್ರೆಯು ಆಚರಣೆ ಮಾಡುತ್ತಾ ಬಂದಿದ್ದಾರೆ.

ಗ್ರಾಮದ ಭಕ್ತರಾದ ಶಂಕ್ರಪ್ಪ ಕೊಟನೂರು, ಜಯಾನಂದ ಡಿ.ಕೋಟನೂರು, ಮಲ್ಲಿನಾಥ ತಿಪ್ಪಣ್ಣಾ ಮಾನೆ, ಶಾಂತಪ್ಪ ಕೊಹಿನೂರು, ಶೇಖರ ಮಾನೆ ಅವರು ಹರಕೆ ಹೊತ್ತು ಸಿದ್ಧಗೊಳಿಸಿದ ಮದ್ದಿನ ಹುಲಿಗಳನ್ನು ಮೊದಲು ಬಜರಂಗಬಲಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತಂದರು.

ನಂತರ ಶೇಖ್ ಜಿಂದಾವಲಿ ದರ್ಗಾಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಲಾಯಿತು.

ಹಲಗೆ ವಾದ್ಯಗಳ ಸಂಭ್ರಮದೊಂದಿಗೆ ಸರ್ಕಾರಿ ಶಾಲೆಯ ಮುಂಭಾಗದ ರಸ್ತೆಗೆ ಐದು ಮದ್ದಿನ ಹುಲಿಗಳನ್ನು ತಂದು, ಒಂದೊಂದು ಮದ್ದಿನ ಹುಲಿಯ ಓಟವನ್ನು ನೂಲಿನ ಹಗ್ಗದ ಮೇಲೆ ಪೂಜೆ ಸಲ್ಲಿಸಿ ಮದ್ದುಗಾರರು ಚಾಲನೆ ನೀಡಿದರು. ಒಂದೊಂದು ಹುಲಿಯು ಮದ್ದಿನ ಆರ್ಭಟ, ಸದ್ದು, ಬೆಂಕಿಯ ಕಿಡಿ ತೂರಾಡುತ್ತಾ ರಾಜ ಗಾಂಭೀರ್ಯದಿಂದ ತಮ್ಮ ವೇಗಗಳನ್ನು ಹೆಚ್ಚಿಸುತ್ತ ದೇವಸ್ಥಾನದವರೆಗೆ ತಲುಪಿದವು.

ರೋಮಾಂಚನಕಾರಿ ಈ ಓಟವು ಕಣ್ಣು ತುಂಬಿಕೊಳ್ಳಲು ಗ್ರಾಮದ ಮುಖ್ಯರಸ್ತೆಯ ಮನೆ, ಮಹಡಿ ಹಾಗೂ ಸುತ್ತ ರಸ್ತೆಗಳ ಇಕ್ಕೆಲದಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಯುವಕರು, ಭಕ್ತರು ಹುಲಿ ಓಟ ಆರಂಭವಾಗುತ್ತಿದ್ದಂತೆ ಜಯಘೋಷ ಮೊಳಗಿಸಿ, ನಮಿಸಿ ಧನ್ಯತೆ ಮೆರೆದರು.

ಐದು ಮದ್ದಿನ ಹುಲಿಗಳ ಓಟವು ಮುಗಿದ ಮೇಲೆ ಮದ್ದುಗಾರ ಶೇಖರ ಹುಗ್ಗಿಗೌಡ ಹಾಗೂ ಹರಕೆ ಹೊತ್ತ ಭಕ್ತರನ್ನು ಗ್ರಾಮದ ಮುಖ್ಯಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನದವರೆಗೆ ತರಲಾಯಿತು. ದೇಗಾಂವ, ಬಸವಣ್ಣ ಸಂಗೋಳಗಿ, ಮುನ್ನೋಳ್ಳಿ, ಬಿಲಗುಂದಿ, ಸನಗುಂದಾ, ಕಮಲಾನಗರ, ಬೋಧನ, ಕಣಮಸ, ತಂಬಕವಾಡಿ, ಹಳ್ಳಿ ಸಲಗರ, ತಡಕಲ ಸೇರಿದಂತೆ ಸುತ್ತಲಿನ ಗ್ರಾಮದ ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.