ಕಲಬುರಗಿ: ‘ಅಖಿಲ ಭಾರತೀಯ ಕೋಲಿ ಸಮಾಜದಿಂದರಾಷ್ಟ್ರಮಟ್ಟದ ಬೃಹತ್ ಸಮಾವೇಶವನ್ನು ಜೂ.21ರಂದು ಬೆಳಿಗ್ಗೆ 10 ಗಂಟೆಗೆ ನವದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಸಮಾಜದ ರಾಜ್ಯ ಘಟಕದ ಶಿಸ್ತು ಸಮಿತಿ ಅಧ್ಯಕ್ಷ ಟಿ.ಡಿ. ರಾಜ್ ತಿಳಿಸಿದರು.

‘ಮುಖ್ಯ ಅತಿಥಿಗಳಾಗಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ವಿಶೇಷ ಅತಿಥಿಯಾಗಿ ಹಿಮಾಚಲಪ್ರದೇಶದ ಸಚಿವ ಕರ್ನಲ್ ಧನಿರಾಮ ಶಾಂಡಿಲ್ ಭಾಗವಹಿಸುವರು. ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವೀರೇಂದ್ರ ಕಶ್ಯಪ್ ಅಧ್ಯಕ್ಷತೆ ವಹಿಸುವರು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕರ್ನಾಟಕದ ಟೋಕ್ರಿ ಕೋಲಿ, ಕೋಲಿಢೋರ, ಕೋಲಿಕಬ್ಬಲಿಗ, ಅಂಬಿಗ, ಬಾರಿಕ, ಮೊಗವೀರ, ಹರಿಕಂತ, ಬೆಸ್ತ ವಿವಿಧ ಪರ್ಯಾಯ ಪದಗಳಿಂದ ಕರೆಯುವ ಸಮಾಜದ ಸ್ಥಿತಿಗತಿ, ಎಸ್.ಟಿ ಸೇರ್ಪಡೆ ಕುರಿತಂತೆ ಸಮಾವೇಶದಲ್ಲಿ ಚರ್ಚೆ ನಡೆಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಾಜದ ಒಗ್ಗಟ್ಟು ಪ್ರದರ್ಶಿಸಲಾಗುವುದು’ ಎಂದರು.

ಸಮಾಜದ ರಾಜ್ಯ ಉಪಾಧ್ಯಕ್ಷೆ ಡಾ.ಇಂದಿರಾ ಶಕ್ತಿ, ಖಜಾಂಚಿ ಮಡಿವಾಳಪ್ಪ ನರಬೋಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-34-1467442308

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.