ಕಲಬುರಗಿ: ಐದು ತಿಂಗಳ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಮಹಾನಗರ ಪಾಲಿಕೆ ಪೌರಕಾರ್ಮಿಕರು, ಚಾಲಕರು, ಲೋಡರ್ಸ್ ಮತ್ತು ಕ್ಲೀನರ್ಸ್ ಶನಿವಾರ ಪಾಲಿಕೆ ಕಚೇರಿ ಎದುರು ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

‘ಪಾಲಿಕೆಯಲ್ಲಿ 1500ಕ್ಕಿಂತ ಹೆಚ್ಚು ಪೌರಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದು, 5 ತಿಂಗಳ ವೇತನ ಬಾಕಿ ಇದೆ. 2023ರ ಏಪ್ರಿಲ್ನಿಂದ 2024ರ ಏಪ್ರಿಲ್ವರೆಗೆ ಬಾಕಿ ಇರುವ ಡಿ.ಎ. ₹ 1.06 ಲಕ್ಷ ಸಹ ಪಾವತಿ ಮಾಡುತ್ತಿಲ್ಲ. ವಾರದ ರಜೆ, ಹಬ್ಬದ ರಜೆಗಳ ವಿವರ ಸಲ್ಲಿಸುವಂತೆ ಕಾರ್ಮಿಕ ಆಯುಕ್ತರು ಮೌಖಿಕವಾಗಿ ತಿಳಿಸಿದರೂ ಪಾಲಿಕೆ ಆಯುಕ್ತರು ವಿವರ ನೀಡಿಲ್ಲ’ ಎಂದು ದೂರಿದರು.

‘ಸಂಬಳಕ್ಕೆ ತಕ್ಕಂತೆ ಪಿಎಫ್ ಕಡಿತಗೊಳಿಸಬೇಕು. ಬಾಕಿ ಶೇ 50ರಷ್ಟು ಜನರಿಗೆ ಇಎಸ್ಐ ಕಾರ್ಡ್ ವಿತರಿಸಬೇಕು. 2017ರ ಜನವರಿಯಿಂದ 2023ರ ನವೆಂಬರ್ವರೆಗೆ ಭಾನುವಾರದ ರಜೆ ನೀಡದೆ ಕೆಲಸ ಮಾಡಿಸಿಕೊಂಡಿದ್ದು, ಇದರ ಸಂಬಳವೂ ಕೊಡಬೇಕು’ ಎಂದು ಒತ್ತಾಯಿಸಿದರು.

42 ಜನ ಸಹಿ ಮಾಡಿದ್ದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಲಾಯಿತು. ಶಿವಶರಣಪ್ಪ ಹೊಸಮನಿ, ಭಾರತಬಾಯಿ ಶಂಕರ, ರಾಣೋಜಿ ಸಾಯಿಬಣ್ಣ, ಶಿವಪುತ್ರ ಮುಡ್ಡಿ, ಮಲ್ಲಪ್ಪ ಬಾವೆ, ಪೀರಪ್ಪ ಸೇರಿದಂತೆ ನೂರಾರು ಪೌರಕಾರ್ಮಿಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.