ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಸಿಂಧು ಆರಂಭಿಸಲು ಒತ್ತಾಯ

Last Updated 15 ಅಕ್ಟೋಬರ್ 2020, 15:41 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸೇವಾಸಿಂಧು ಆನ್‌ಲೈನ್‌ ನೋಂದಣಿ ಸ್ಥಗಿತಗೊಂಡಿದ್ದರಿಂದ ಲಕ್ಷಾಂತರ ಕಾರ್ಮಿಕರು ಪರದಾಡುವಂತಾಗಿದೆ. ಕಳೆದ ಎರಡು ತಿಂಗಳಿಂದ ಆನ್‌ಲೈನ್‌ನಲ್ಲಿ ಯಾವುದೇ ಅರ್ಜಿ ಸ್ವೀಕರಿಸುತ್ತಿಲ್ಲ. ಯಾವುದೇ ಪ್ರಮಾಣ ಪತ್ರವನ್ನೂ ನೀಡುತ್ತಿಲ್ಲ. ಇದನ್ನು ಕೂಡಲೇ ಸರಿಪಡಿಸಬೇಕು’ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುದೇವ ಯಳಸಂಗಿ ಆಗ್ರಹಿಸಿದರು.

‘ರಾಜ್ಯದಲ್ಲಿ 2007ರಿಂದ ಇಲ್ಲಿಯವರೆಗೆ 25 ಲಕ್ಷ ಕಟ್ಟಡ ಕಾರ್ಮಿಕರ ನೋಂದಣಿಯಾಗಿದೆ. ಇನ್ನೂ 70 ಲಕ್ಷ ಕಾರ್ಮಿಕರು ನೋಂದಣಿ ಕಾರ್ಡ್ ಪಡೆದುಕೊಂಡಿಲ್ಲ. ಕಾರಣ, ಸರ್ಕಾರದ ವಿವಿಧ ಸವಲತ್ತುಗಳಿಂದ ಅವರು ವಂಚಿತರಾಗುತ್ತಿದ್ದಾರೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾರ್ಮಿಕರ ಹಿತದೃಷ್ಟಿಯಿಂದ ಕಲಬುರ್ಗಿ ವಿಭಾಗಕ್ಕೇ ಒಬ್ಬ ಪ್ರತ್ಯೇಕ ಕಾರ್ಮಿಕ ಅಧಿಕಾರಿಯನ್ನು ಹಾಗೂ ಪ್ರತಿ ತಾಲ್ಲೂಕಿಗೂ ಒಬ್ಬ ಹಿರಿಯ ನಿರೀಕ್ಷಕರನ್ನು ನೇಮಕ ಮಾಡಬೇಕು. ವಿವಿಧ ಯೋಜನೆಗಳಿಗಾಗಿ ಅರ್ಜಿ ಹಾಕಿದ ಫಲಾನುಭವಿಗಳನ್ನು ಕೂಡಲೇ ಗುರುತಿಸಬೇಕು’ ಎಂದರು.

‘ಸಾಲ ಮಾಡಿ ಮದುವೆ ಮಾಡಿದ ನೋಂದಾಯಿತ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗೆ ₹ 50 ಸಾವಿರ ಮದುವೆ ಸಹಾಯ ಧನ ಒದಗಿಸಬೇಕು. ಅದನ್ನು ಮದುಮಗಳ ಖಾತೆಗೆ ನೀಡಿದರೆ ಸಾಲ ಮಾಡಿದ ಕಾರ್ಮಿಕರಿಗೆ ಏನೂ ಪ್ರಯೋಜನವಾಗುವುದಿಲ್ಲ‍’ ಎಂದರು.

‘ಜಿಲ್ಲೆಯಲ್ಲೂ 68 ಸಾವಿರ ಕಟ್ಟಡ ಕಾರ್ಮಿಕರಿದ್ದಾರೆ ಕೋವಿಡ್‌ನಿಂದ ಕಾರಣ ತಲಾ ₹ 5,000 ಪರಿಹಾರ ಧನವನ್ನು ಕಾರ್ಮಿಕರ ಮಂಡಳಿಯಿಂದ ನೀಡಲು ಆದೇಶಿಸಲಾಗಿತ್ತು. ಜಿಲ್ಲೆಯಲ್ಲಿ ಇನ್ನೂ 15,000 ಕಾರ್ಮಿಕರಿಗೆ ಪರಿಹಾರ ದೊರಕಿಲ್ಲ. ದೊರಕಿದವರಿಗೆ ₹ 3000 ಮಾತ್ರ ಬಂದಿದೆ. ಇದಕ್ಕೆ ಕಾರಣ ಏನೆಂದು ಸಂಬಂಧಿಸಿದ ಸಚಿವರು ಗಮನಿಸಬೇಕು’ ಎಂದೂ ಕೋರಿದರು.

ಸಮಿತಿ ಜಿಲ್ಲಾ ಘಟಕದ ಸಂಚಾಲಕರಾದನಾಗಯ್ಯ ಸ್ವಾಮಿ, ಶಂಕರ ಕಟ್ಟಿಸಂಗಾವಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT